Monday, August 8, 2022

Latest Posts

ಯಾದಗಿರಿ| ಉಸಿರಾಟ ತೊಂದರೆಯಿಂದ ಮಹಿಳೆ ಸಾವು: ಕೋವಿಡ್ ಪರೀಕ್ಷೆಗೆ ಮಾದರಿ ರವಾನೆ

ಯಾದಗಿರಿ: ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಅರಕೇರಾ (ಕೆ) ತಾಂಡಾದ 50 ವರ್ಷದ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಬೋರಬಂಡ ತಾಂಡಾ, ಪಸಪೂಲ್ ತಾಂಡಾ ಹಾಗೂ ಇನ್ನಿತರ ತಾಂಡಾಗಳ 24 ಜನರು ಮೇ 20ರಂದು ಮುಂಬೈನ ಚಂಬುರ್ ಭರತನಗರದಿಂದ ಯಾದಗಿರಿಗೆ ಆಗಮಿಸುತ್ತಿದ್ದಾಗ ತಾಲ್ಲೂಕಿನ ಯರಗೋಳ ಚೆಕ್ಪೋಸ್ಟಟ ಹತ್ತಿರ ಸಿಕ್ಕು ಹಾಕಿಕೊಂಡಿದ್ದಾರೆ.

ಇವರನ್ನು ಚೆಕ್ಪೋಸ್ಟ್ನಲ್ಲಿ ಸ್ಕ್ರೀನಿಂಗ್ ಮಾಡುವಾಗ ಅರಕೇರಾ (ಕೆ) ತಾಂಡಾದ ಮಹಿಳೆ ತೀವ್ರ ಉಸಿರಾಟದಿಂದ ಬಳಲುತ್ತಿರುವುದನ್ನು ಕಂಡು ಬಂದಿದೆ. ಕರ್ತವ್ಯನಿರತ ಯಾದಗಿರಿ ಎ.ಸಿ.ಎಫ್ ರವರು ಆಂಬ್ಯುಲೆನ್ಸ್ ಬರುವುದನ್ನು ಕಾಯದೇ ತುರ್ತಾಗಿ ತಮ್ಮ ವಾಹನದ ಮೂಲಕ ಹೊಸ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸದರಿ ಮಹಿಳೆ ಸಾವನ್ನಪ್ಪಿದ್ದಾರೆ. ಮುಂಜಾಗ್ರತ ಕ್ರಮವಾಗಿ ಮಹಿಳೆಯ ಗಂಟಲಿನ ದ್ರವದ ಮಾದರಿಯನ್ನು (ಸ್ವಾಬ್ ಸ್ಯಾಂಪಲ್) ಕೋವಿಡ್-19 ಪರೀಕ್ಷೆಗಾಗಿ ರವಾನಿಸಲಾಗಿರುತ್ತದೆ.

ಉಳಿದವರನ್ನು ಜ್ವರ ತಪಾಸಣಾ ಕೇಂದ್ರದಲ್ಲಿ ಸ್ಕ್ರೀನಿಂಗ್ ಮಾಡಿ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ನಿಗದಿತ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ನಲ್ಲಿ ಅವಲೋಕನೆಗಾಗಿ ಇರಿಸಲಾಗಿರುತ್ತದೆ. ಜಿಲ್ಲಾಡಳಿತವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕ ಪಡಬಾರದು ಎಂದು ಅವರು ಕೋರಿದ್ದಾರೆ.

ಹೋಂಗಾರ್ಡ ಮೇಲೆ ಹಲ್ಲೆ: ಯರಗೋಳ ಚೆಕ್ ಪೋಸ್ಟ ಸಮೀಪ ಇವರನ್ನು ತಡೆಹಿಡಿದಾಗ ಮೃತ ಮಹಿಳೆಯ ಸಂಬಂಧಿಕರು ಕ್ವಾರಂಟೈನ ಕೇಂದ್ರಕ್ಕೆ ಹೋಗಲು ನಿರಾಕರಿಸಿ ತಡೆಯಲು ಬಂದ ಹೋಂಗಾರ್ಡ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದಾಗ್ಯೂ ಅಧಿಕಾರಗಳು ಪರಸ್ತಿಯನ್ನು ತಿಳಿಗೊಳಿಸಿ ಅವರೆಲ್ಲರನ್ನು ಕ್ವಾರಂಟೈನ ಕೇಂದ್ರಕ್ಕೆ ಕಳಹಿಸಿಕೊಡಲಾಗಿದೆ.

ಮುಮಬೈಯಿಂದ ಕೂಲಿ ಕಾರ್ಮಿಕರು ಖಾಸಗಿ ವಾಹನದಲ್ಲಿ ಬರುತ್ತಲೆ ಇದ್ದಾರೆ. ಆದರೆ ಕ್ವಾರಂಟೈನ ಕೇಂದ್ರಕ್ಕೆ ಹೋಗಬಾರದು ಎಂದು ಕಳ್ಳ ದಾರಿ ಹುಡುಕುತ್ತಿದ್ದಾರೆ. ಇನ್ನೂ ಸಿಕ್ಕು ಹಾಕಿಕೊಮಡವರು ಇಲ್ಲದ ತಂಟೆ ತೆಗೆದು ತಾವು ತಮ್ಮ ಮನೆಗೆ ಹೋಗುವುದಾಗಿ ಪಟ್ತ್ತಿಹಿಡಯುತ್ಟುದ್ತಿದಾರೆ. ಇಲ್ಲವಾದಲ್ಲಿ ಅದಿಕಾರಿಗಳ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss