Monday, August 8, 2022

Latest Posts

ಯಾದಗಿರಿ| ಎರಡು ಮಿಲ್‌ಗಳಲ್ಲಿ ಹತ್ತಿ ಖರೀದಿ: ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾಯ

ಯಾದಗಿರಿ : ೨೦೧೯-೨೦ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭಾರತೀಯ ಹತ್ತಿ ನಿಗಮ ವತಿಯಿಂದ ಶಹಾಪೂರ ತಾಲ್ಲೂಕಿನ ಜೇವರ್ಗಿ ರಸ್ತೆಯ ಮದ್ರಿಕಿ ಹತ್ತಿರದಲ್ಲಿರುವ ಆರ್.ಎಸ್.ಫೈಬರ್ ಕಾಟನ್ ಜಿನ್ನಿಂಗ್ ಮಿಲ್‌ನಲ್ಲಿ ಈಗಾಗಲೇ ಏಪ್ರಿಲ್ ೩೦ರಿಂದ ರೈತರಿಂದ ಹತ್ತಿ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದು, ಇದರ ಜೊತೆಗೆ ಮೇ ೧೯ರಿಂದ ಶಹಾಪುರ ತಾಲ್ಲೂಕಿನ ಗೋಗಿ ರಸ್ತೆಯಲ್ಲಿರುವ ಮಂಜೀತ್ ಕಾಟನ್ ಅಂಡ್ ಜಿನ್ನಿಂಗ್ ಮಿಲ್‌ನಲ್ಲಿ ಕೂಡ ನಿಗಮದ ವತಿಯಿಂದ ಗುಣಮಟ್ಟದ ಹತ್ತಿ ಖರೀದಿಸಲಾಗುತ್ತಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಅವರು ತಿಳಿಸಿದ್ದಾರೆ.
ಜಿಲ್ಲೆಯ ರೈತ ಬಾಂಧವರು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ತಮ್ಮ ಹತ್ತಿರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಹೆಸರು ನೋಂದಾಯಿಸಿಕೊAಡು ಆರ್.ಎಸ್.ಫೈಬರ್ ಕಾಟನ್ ಜಿನ್ನಿಂಗ್ ಮಿಲ್ ಮತ್ತು ಮಂಜೀತ್ ಕಾಟನ್ ಜಿನ್ನಿಂಗ್ ಮಿಲ್‌ಗಳಲ್ಲಿ ಭಾರತೀಯ ಹತ್ತಿ ನಿಗಮಕ್ಕೆ ಹತ್ತಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳನ್ನು ಹಾಗೂ ಜಿಲ್ಲೆಯ ಮಾರುಕಟ್ಟೆ ಸಮಿತಿ ಸಿಬ್ಬಂದಿಗಳಾದ ವಿನೋದಕುಮಾರ್ ಮೊ:೯೭೪೩೫೯೧೬೨೭ ಮತ್ತು ಭಾರತೀಯ ಹತ್ತಿ ನಿಗಮದ ಪ್ರತಿನಿಧಿ ನಾಗೇಶ್ವರರಾವ್ ಮೊ:೯೪೪೧೦೮೫೩೪೯ ಇವರನ್ನು ಸಂಪರ್ಕಿಸಲು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss