ಯಾದಗಿರಿ: ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯದ ಪ್ರಶ್ನೆ ಪತ್ರಿಕೆ ನೀಡಲಾದ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾಗಿತ್ತು.
ಕೆಂಭಾವಿ ಒಂದು ಪರೀಕ್ಷಾ ಕೇಂದ್ರದಲ್ಲಿ 4 ವಿದ್ಯಾರ್ಥಿನಿಯರಿಗೆ ಹಾಗೂ ಒಬ್ಬ ವಿದ್ಯಾರ್ಥಿಗೆ ೨೦೨೦ ಹೊಸ ಪರ್ಠಯ ಕ್ರಮದ ಪ್ರಶ್ನೆ ಪತ್ರಿಕೆಯ ಬದಲಿಗೆ ೨೦೧೮-೧೯ ನೆಯ ಸಾಲಿನ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದಾರೆ. ಅರ್ಧ ಗಂಟೆಯ ಮೇಲೆ ವಿದ್ಯಾರ್ಥಿಗಳು ಕೊಣೆಯ ಮೇಲ್ವಿಚಾರಕರ ಗಮನಕ್ಕೆ ತಂದರೂ ಯಾವುದೆ ಕ್ರಮ ಜರಗಿಸದೆ ಸರಿ ಇದೆ ಎಂದು ಹೇಳಿದ್ದಾರೆ.
ಈ ವಿಷಯ ತಡವಾಗಿ ಪತ್ರಿಕೆಯಲ್ಲಿ ಬಹಿರಂಗ ಗೊಳ್ಳುತ್ತಿರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕೋಣೆಯ ಮೇಲ್ವಿಚಾರಕ ಶಿಕ್ಷಕ ಪರಮಣ್ಣ ಮತ್ತು ಪ್ರಶ್ನೆ ಪತ್ರಿಕೆ ಮೇಲ್ವಿಚಾರಕ ಗೊಂಡಲಗೇರಾ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾದ ಅಬ್ದುಲ್ ಕಹೀಮ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೆ ವಿಷಯು ಕುರಿತು ಬೆಂಗಳೂರಿನಲ್ಲಿ ಸಚಿಜೆ ನಡೆಸಿದ ಪತ್ರಿಕಾ ಗೊಷ್ಟಿಯಲ್ಲಿ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಸ್ಪಷ್ಠಣೆ ನೀಡಿ, ಕೆಂಭಾವಿಯಲ್ಲಿ ಕನ್ನಡ ಮಾಧ್ಯಮದ ೫ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯ ಕ್ರಮದ ಪ್ರಶ್ನೆ ಪತ್ರಿಕೆ ನೀಡಿದ್ದು ತಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಉತ್ತರ ಪತ್ರಿಕೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ತಪ್ಪು ಎಸಗಿದವರ ವಿರುದ್ದ ಶಿಸ್ತುಕ್ರಮ ಜರಗಿಸಲಾಗುವುದು. ಹಾಗೆಯೇ ವಿದ್ಯಾರ್ಥಿಗಳಿಗೆ ಯಾವುದೆೆ ರೀತಿಯ ಅನ್ಯಾಯವಾಗದಂತೆ ಮೌಲ್ಯಮಾಪನ ಮಾಡಿಸಿ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.