Saturday, August 13, 2022

Latest Posts

ಯಾದಗಿರಿ| ಕೃಷ್ಣಾ ನದಿಗೆ ಪ್ರವಾಹದ ಭೀತಿ: ವಿದ್ಯುತ್ ಮೋಟಾರು ತೆರವುಗೊಳಿಸಲು ಅನ್ನದಾತರ ಹರಸಾಹಸ

ಯಾದಗಿರಿ : ಜಿಲ್ಲೆಯ ಕೃಷ್ಣಾ ನದಿಗೆ ನಾರಾಯಣಪೂರ ಜಲಾಶಯದಿಂದ ಶುಕ್ರವಾರ ಬೆಳಿಗ್ಗೆ 1.85 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಪ್ರವಾಹದ ಭೀತಿ ಕಂಡು ಬಂದಿದೆ. ಹೀಗಾಗಿ ನದಿ ಪಾತ್ರದಲ್ಲಿ ಅಳವಡಿಸಲಾದ ವಿದ್ಯುತ್ ಮೋಟಾರುಗಳನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಮಹಾರಾಷ್ಟ್ರ ಮತ್ತು ಬೆಳಗಾವಿ ಬೀಳುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಆಲಿಮಟ್ಟಿ ಜಲಾಶಯದಿಂದ ನಾರಾಯಣಪೂರ ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಡಲಾಗಿದೆ. ಇದರಿಂದಾಗಿ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 22 ಗೇಟುಗಳ ಮೂಲಕ ನೀರು ಕೃಷ್ಣಾ ನದಿಗೆ ಬಿಡಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಕೆಲ ಗ್ರಾಮಗಳ ಸಾವಿರಾರು ಎಕರೆ ಜಮೀನು ಜಲಾವೃತ್ತಗೊಳ್ಳಿದೆ.
ಯಾವುದೆ ಮುನ್ಸೂಚನೆ ನೀಡದೆ ನದಿಗೆ ನೀರು ಬಿಟ್ಟ ಕಾರಣ ರೈತರು ನದಿಗೆ ಅಳವಡಿಸಲಾದ ಸಾವಿರಾರು ರೂಪಾಯಿ ಬೆಲೆಬಾಳುವ ವಿದ್ಯುತ್ ಮೋಟಾರುಗಳನ್ನು ರಕ್ಷಿಸಿಕೊಳ್ಳಲು ಹಗಲಿರಳು ಹರಸಾಹಸ ಪಡುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಪ್ರವಾಹದಿಂದ ಅಪಾರ ಹಾನಿಗೊಳಗಾದ ಅನ್ನದಾತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲಕಿದ್ದಾರೆ.
ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಯಾದಲ್ಲಿ ಧಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಹುಣಸಗಿ ತಾಲೂಕಿನ ಸುಕ್ಷೇತ್ರ ಛಾಯಾ ಭಾಗವತಿ ಮತ್ತು ದೇವದುರ್ಗಾ ತಾಲೂಕಿನ ಕೊಪ್ಪರ ನರಸಿಂಹ ದೇಚಸ್ಥಾನ ಮುಳುಗಡೆಯಾಗುವ ಸಾಧ್ಯತೆ ಇದೆ. ಅಲ್ಲದೆ ಶಹಾಪುರ ತಾಲೂಕಿನ ಕೌಳುರು ಸೇತುವೆ ಮುಳುಗಡೆಯಾಗಿ ರಾಯಚೂರು-ಕಲಬುರಗಿ ಸಂಪರ್ಕ ಕಡಿತವಾಗಲಿದೆ. ಈಗಾಗಲೇ ಈ ಸೇತುವೆಯ ಮೇಲೆ ಭಾರಿ ವಾಹನಗಳ ಸಂಚಾರವನ್ನು ರದ್ದು ಪಡಿಸಲಾಗಿದೆ ಎಂದು ತಹಸೀಲದಾರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss