ಯಾದಗಿರಿ| ಕೇಂದ್ರದಿಂದ ರೈತರ ವಿದ್ಯುತ್ ಕಡಿತ: ಕಿಸಾನ್ ಕಾಂಗ್ರೆಸ್ ಆಕ್ರೋಶ: ಡಿಸಿಗೆ ಮನವಿ

0
44

ಯಾದಗಿರಿ: ಕೋವಿಡ್ ಸಂದರ್ಭ ದುಪುರಪಯೋಗ ಮಾಡಿಕೊಂಡು ಕೇಂದ್ರ ಹೊಸ ವಿದ್ಯುತ್ ಮಸೂದೆಯನ್ನು ಮಂಡಿಸಿ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದು ಇದನ್ನು ಕೂಡಲೇ ಕೈಬಿಡುವಂತೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯ ಸಮಿತಿ ಕರೆಯ ಮೆರೆಗೆ ನಗರದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ನಿಲುವಿಗೆ ಕಟು ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ರೈತರಿಗೆ ಸಮಸ್ಯೆ ಸೃಷ್ಟಿಸಲು ಕೇಂದ್ರವು ಯತ್ನಿಸುತ್ತಿದೆ. ಹಾಗೂ ಪ್ರಧಾನಿ ಮೋದಿ ಸ್ನೇಹಿತರಾದ ಉದ್ಯಮಿ ಗೌತಮ ಅದಾನಿ ಹಾಗೂ ಇತರರಿಗೆ ಲಾಭ ಮಾಡಿಕೊಡಲು ಹುನ್ನಾರ ನಡೆಸುತ್ತಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ಇಂತಹ ಗಂಭೀರ ವಿಚಾರದಲ್ಲಿ ಕೇಂದ್ರ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಈ ವಿಚಾರವಾಗಿ ಕೇಂದ್ರ ಅಭಿಪ್ರಾಯ ತಿಳಿಸಲು 21 ದಿನಗಳ ಗಡುವು ಇದ್ದು ಇದು ಸಹ ಮುಗಿಯುವ ಹಂತದಲ್ಲಿದೆ
ಈ ಕಾರಣದಿಂದ ಯಾವುದೇ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕರ ಕೇಂದ್ರದ ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಬಾರದು ಎಂದು ಒತ್ತಾಯಿಸಿದರು.

ಈಗಾಗಲೇ ಕಳೆದ ಆರು ಎಂಟು ವರ್ಷಗಳಿಂದ ಭೀಕರ ಬರಗಾಲ ಪರಿಸ್ಥಿತಿ ಇದ್ದು ಇದರಲ್ಲಿ ಸಧ್ಯ 6-7 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದು ಇದರಲ್ಲಿಯೇ ಲೈನ್ ಫಾಲ್ಟ್ ನೆಪದಲ್ಲಿ ಇನ್ನಷ್ಟು ಕಡಿತ ಮಾಡಿ ವಿದ್ಯುತ್ ಕೊಡುವುದೇ ಕಡಿಮೆ ಆದರೆ ಇಂತಹ ಸಂದರ್ಭದಲ್ಲಿ ಮತ್ತೆ ದೊಡ್ಡ ಅನ್ಯಾಯ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಈ ಕ್ರಮ ಕೈಬಿಡಬೇಕು ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಮು ಮುಂಡರಗಿ, ಸಂಜಯ ಕುಮಾರ ಕವಲಿ, ರಾಜು ಕಲಾಲ್, ಸೋಮಶೇಖರ ಮಸ್ಕನಳ್ಳಿ, ನಾಗರಾಜ ಅವಂಟಿ, ರಮೇಶ ಹೊರಪೇಟಿ, ಹುಲೆಪ್ಪ ಏಕನಾಥ, ಮಲ್ಲಪ್ಪ, ಮಲ್ಲಪ್ಪ ಸಂದ್ಲೆಪ್ಪನೋರ್, ರಾಜು ಬಾಗ್ಲಿ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here