ಯಾದಗಿರಿ: ಕೋರೋನಾ ಬೀಗಮುದ್ರೆಯಿಂದ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರರು, ಗ್ರಾಮೀಣ ಕಸಬುದಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅದಕ್ಕಾಗಿ ಸರ್ಕಾರ ಅವರ ನೆರವಿಗೆ ಬರುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ ಕಾರ್ಯಕರ್ತರು, ಬೀಗಮುದ್ರೆಯಿಂದ ತೀರ ಸಂಕಷ್ಟಕ್ಕೆ ಈಡಾಗಿರುವ ಇಂತಹ ಪರಿಸ್ಥಿತಿಯಲ್ಲಿ ಕಾರ್ಪೋರೇಟ್ ಕಂಒಪೆನಿಗಳ ಪರವಾದ, ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಅಂಗೀಕರಿಸುವAತೆ ನೀಡಿದ ನಿರ್ದೇಶನ ಹಿಂಪಡೆಯಬೇಕು.
ಗೋದಾಮುಗಳಲ್ಲಿ ಯತೇಚ್ಛವಾಗಿರುವ ಆಹಾರ ಪದಾರ್ಥಗಳನ್ನು ಇಂದಿನ ಸಂಕಷ್ಟ ಸಮಯದಲ್ಲಿ ಎಪಿಎಲ್, ಬಿಪಿಎಲ್ ಎಂದು ನೋಡದೇ ಎಲ್ಲರಿಗೂ ಸಮಾನವಾಗಿ ಹಂಚಬೇಕು. ಮಾಸಿಕ ಪ್ರತಿ ಕುಟುಂಬಕ್ಕೆ 15 ಕೆಜಿ ರೇಷನ್ ನೀಡಬೇಕು. ಅದರ ಜೊತೆ ಎಣ್ಣೆ, ಬೇಳೆ ಮುಂತಾದವನ್ನು ನೀಡಬೇಕು. ಡಾ|| ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಎಲ್ಲ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ. 50 ರಷ್ಟು ಲಾಭವನ್ನು ಸೇರಿಸಿ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತಕೂಲಿಕಾರರಿಗೆ ಬೀಗಮುದ್ರೆಯಿಂದ ತೊಂದರೆಯಾಗಿರುವುದರಿAದ ಮೂರು ತಿಂಗಳು ತಲಾ 10,000/- ರೂ. ನೀಡಬೇಕು. ಪಿಎಂ ಕಿಸಾನ ಯೋಜನೆ ಮೊತ್ತ ಕನಿಷ್ಟ 18,000/- ಕ್ಕೆ ಏರಿಸಬೇಕು. ಉದ್ಯೋಗ ಖಾತ್ರಿ ಕೆಲಸಗಳು ಸಮರ್ಪಕಜಾರಿ ಮಾಡಬೇಕು, ಕೆಲಸದ ದಿನಗಳ ಮಿತಿಯನ್ನು ತೆಗೆದುಹಾಕಬೇಕು ಎಂಬ ಹಲವು ಬೇಡಿಕೆಯನ್ನು ಓಡೇರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಬೀಗಮುದ್ರೆ ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಜನರು ಜನಚಳುವಳಿಗಳ ಮೇಲಿನ ದಮನಕಾರಿ ಕ್ರಮಗಳನ್ನು ಕೈಬಿಡಬೇಕು. ಅರಣ್ಯ ಭೂಮಿ ಸಾಗುವಳಿದಾರರಿಗೆ 75 ವರ್ಷ ದಾಖಲೆ ಕೊಡಲು ಸಾಧ್ಯವಿಲ್ಲದೇ ಇರುವುದರಿಂದ ಅರಣ್ಯ ಹಕ್ಕಿನ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಕೆಪಿಆರ್.ಎಸ್ ತಾಲ್ಲೂಕು ಅಧ್ಯಕ್ಷ ಮುದುಕಪ್ಪ ಚಾಮನಳ್ಳಿ ಮನವಿ ಸಲ್ಲಿಸಿದರು. ಮುಖಂಡರಾದ ಅಬ್ದುಲ್ ರಹಿಮಾನ, ಆಂಜಿನೇಯ ಹೆಡಗಿಮುದ್ರಿ, ಮಲ್ಲಿಕಾರ್ಜುನ ಚಾಮನಳ್ಳಿ, ಚಂದ್ರಕಾAತ ಹೆಡಗಿಮುದ್ರಾ, ಚಂದಾಸಾಬ ಹೆಡಗಿಮುದ್ರಿ ಇದ್ದರು.