ಹೊಸದಿಗಂತ ವರದಿ ಯಾದಗಿರಿ :
ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಲಸಿಕೆ ತಾಲೀಮುಗೆ ಅಗತ್ಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ 6 ಡ್ರೈರನ್ ಕೇಂದ್ರಗಳು ಆರಂಭ ಮಾಡುತ್ತಿದ್ದು, ಮುದ್ನಾಳ ನೂತನ ಜಿಲ್ಲಾಸ್ಪತ್ರೆ ,ನಗರದ ವಿಬಿಆರ್ ಖಾಸಗಿ ಆಸ್ಪತ್ರೆ ಸೇರಿ 6 ಕೇಂದ್ರಗಳ ಆರಂಭ. ಒಟ್ಟು 6 ತಂಡ ರಚಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ 30 ಜನರ ನಿಯೋಜನೆ ಮಾಡಲಾಗಿದ್ದು,1 ಕೇಂದ್ರದಲ್ಲಿ 25 ಕೊರೊನಾ ವಾರಿಯರ್ಸ್ ಗಳಿಗೆ ಡ್ರೈರನ್, ನೂತನ ಜಿಲ್ಲಾಸ್ಪತ್ರೆಯಲ್ಲಿ ನಿರೀಕ್ಷಣಾ ಕೋಣೆ,ಲಸಿಕಾ ಕೊಠಡಿ, ವೀಕ್ಷಣಾ ಕೊಠಡಿ ಆರಂಭಿಸಲಾಗಿದೆ.
ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಡ್ರೈರನ್ ಆರಂಭ ಮಾಡಲು ಸಿದ್ದತೆ ಯಾಗಿದೆಂದು
ಡಿಎಚ್ ಓ ಡಾ.ಇಂದುಮತಿ ಪಾಟೀಲ ಮಾಹಿತಿ ನೀಡಿದರು.ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಆರಂಭ ಮಾಡಲಾಗುತ್ತಿದೆ, ಈಗಾಗಲೇ ಎಲ್ಲಾ ಕಡೇ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ,
ಪ್ರತಿ ಕೇಂದ್ರದಲ್ಲಿ 25 ಕೊರೊನಾ ವಾರಿಯರ್ಸ್ ಗಳಿಗೆ ಡ್ರೈರನ್ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.