Tuesday, August 9, 2022

Latest Posts

ಯಾದಗಿರಿ| ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪಿ ಬಂಧನ, ನಗದು ವಶಕ್ಕೆ

ಯಾದಗಿರಿ : ನಗರದ ಡಬರ ಮೊಹಲ್ಲಾ ಏರಿಯಾದಲ್ಲಿ ಕೆಲವರು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಭಾನುವಾರದಂದು ಸಿಪಿಐ ಸೋಮಶೇಖರವರ ನೇತೃತ್ವದಲ್ಲಿ ಪೊಲೀಸರ ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಯಾದಗಿರಿ ನಗರದ ಡಬರ ಮೊಹಲ್ಲಾ ಏರಿಯಾದಲ್ಲಿ ಒಂದು ಮನೆಯಲ್ಲಿ ಸೈಯ್ಯದ ಮಕ್ಸೂದ್ಅಲಿ ತಂದೆ ಕುದರತ ಅಲಿ ಸೈಯ್ಯದ್, (35)ಎಂಬಾತನನ್ನು ಬಂಧಿಸಿ ಆತನಲ್ಲಿದ್ದ ನಗದು ಹಣ ರೂ.47000, ರೂ.1000 ಮೌಲ್ಯದ ಒಂದು ರೆಡ್ಮಿ ಮೊಬೈಲ್ , ಒಂದು ಸಣ್ಣ ಲಾವಾ ಕಂಪನಿಯ ಮೊಬೈಲ್ ಗಳ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯದಿಂದ ಪಡವಾನಿಗೆ ಪಡೆದುಕೊಂಡಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ ಈ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಗರ ಪೊಲೀಸ ಠಾಣೆಯಲ್ಲಿ ಮುಂದು ವರಿಸದಸಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss