ಗುರುಮಠಕಲ್ (ಯಾದಗಿರಿ): ಕೊರೊನಾ ಭೀತಿ ಮಧ್ಯೆಯೂ ಗುರುಮಠಕಲ್ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರು ಮುಂಗಾರು ಬೆಳೆಗಳನ್ನು ಬಿತ್ತನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಮುಂಗಾರು ಹಂಗಾಮಿನ ಮಳೆ ಬಿದ್ದಿದ್ದು, ಬಿತ್ತನೆಗೆ ರೈತರು ಭೂಮಿಯನ್ನು ಹದಗೊಳಿಸಿ ತಮಗೆ ಬೇಕಾಗುವ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ತಾಲೂಕಿನಲ್ಲಿ ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ಕೇವಲ ಮಳೆಯಾಶ್ರತಿ ಕೃಷಿ ಮಾಡುತ್ತಾರೆ. ಪ್ರಸಕ್ತ ಒನ್ನಿಂದು ಮಳೆ ಬಂದಲ್ಲಿ ಹೆಸರ ಬಿತ್ತನೆ ಮಾಡುತ್ತಾರೆ. ಇದು ಕೇವಲ 45 ದಿನಗಳಲ್ಲಿ ರೈತರ ಕೈಗೆ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಇದರಿಂದಾಗ ವಾರ್ಷಿಕ ಕೃಷಿಗೆ ಆರ್ಥಿಕ ನೆರವು ಸಿಕ್ಕಂತಾಗುತ್ತದೆ. ಅದಕ್ಕಾಗಿ ರೈತರು ಇನ್ನೊಂದು ಮ,ಳೆಯ ನಿರೀಕ್ಷೆ ಮಾಡುತ್ತಿದ್ದಾರೆ.
ಗುರುಮಠಕಲ್ ವಲಯದಲ್ಲಿ ಒಟ್ಟು 27000 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 14000 ಹೆಕ್ಟೇರ್ ಮಳೆಯಾಧಾರಿತ ಭೂಮಿಯಾಗಿದೆ. ಈ ವಲಯದಲ್ಲಿ ಕೃಷಿ ಚಟುವಟಿಕೆಗೆ ಸಂಬAಧಿಸಿದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ರೈತರಿಗೆ ಸಹಕಾರ ನೀಡಲು ಕೃಷಿ ಇಲಾಖೆ ಸನ್ನದ್ಧವಾಗಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಮಾಡಲು ತೊಗರಿ, ಸಜ್ಜೆ, ಹೆಸರು ಸೇರಿದಂತೆ ಇನ್ನುಳಿದ ಬಿತ್ತನೆ ಬೀಜಗಳನ್ನು ಸರ್ಕಾರ ಸರಬರಾಜು ಮಾಡಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ಬೆಲೆಯಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ.
ಕೊರೋನಾ ಭೀತಿಯಿಂದ ದುಡಿಯಲು ಹೋದ ವಲಸಿಗತೂ ತಮ್ಮ ಗ್ರಮಗಳಿಗೆ ವಾಪಸ್ಸು ಮರಳಿದ್ದಾರೆ. ಹೀಗಾಗಿ ತಮ್ಮದೆಯಾದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇನ್ನೂ ಕೆಲವರೂ ಮನೆರೆಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ.
ಒಟ್ಟಾರೆ ಈ ಸಲ ಜಿಲ್ಲೆಯಲ್ಲಿ ಉತ್ತಮ ಮಳೆ ಬರುವ ಸಾಧ್ಯತೆ ಕಂಡು ಬರುತ್ತಿದ್ದು ಗ್ರಮೀನ ಭಾಗದ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ವರುಣದೇವರ ಜಿಲ್ಲೆಯ ಜನರ ಮೇಲೆ ಯಾವ ರೀತಿ ಕರಪೆ ತೋರುತ್ತಾನೆ ಎಂಬುದು ಕಲವೇ ನಿರ್ಧರಿಸಬೇಕಿದೆ.