Friday, July 1, 2022

Latest Posts

ಯಾದಗಿರಿ| ಗೃಹ ದಿಗ್ಬಂಧನ ಉಲ್ಲಂಘನೆ, 3 ಪ್ರಕರಣ ದಾಖಲು: ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್

ಯಾದಗಿರಿ : ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರಿಗೆ ಗೃಹ ದಿಗ್ಬಂಧನದಲ್ಲಿ ಇರುವಂತೆ ಸೂಚನೆ ನೀಡಿದರೂ ಸರ್ಕಾರದ ಆದೇಶವನ್ನು ಪಾಲಿಸದೆ ಕೊರೊನಾ ವೈರಸ್ ಹರಡಿಸುವ ದುರುದ್ದೇಶದಿಂದ ಹೊರಗಡೆ ತಿರುಗಾಡುವುದು ಕಂಡುಬoದಿರುವ ಪ್ರಯುಕ್ತ ಜಿಲ್ಲೆಯ ಕೆಂಭಾವಿ ಲಕ್ಷ್ಮಿ ನಗರ, ಏವೂರು ತಾಂಡಾ (ಬಿ) ಹಾಗೂ ಹೈಯ್ಯಾಳ (ಕೆ) ಗ್ರಾಮದ ವ್ಯಕ್ತಿಗಳ ವಿರುದ್ಧ ಒಟ್ಟು ಮೂರು ಪ್ರಕರಣ ದಾಖಲಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡ ನಂತರ ಗೃಹ ದಿಗ್ಬಂಧನ ಅವಲೋಕನೆಗಾಗಿ ಕೇಂದ್ರ/ರಾಜ್ಯ ಸರ್ಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಸ್ಟಾö್ಯಂಪಿAಗ್ ಮತ್ತು ಹೆಲ್ತ್ ಸ್ಕಿçÃನಿಂಗ್ ಮಾಡಿ ಗೃಹ ದಿಗ್ಬಂಧನಕ್ಕಾಗಿ ಕಳುಹಿಸಲಾಗುತ್ತಿದೆ. ಆದರೆ, ಸುರುಪುರ ತಾಲ್ಲೂಕಿನ ಲಕ್ಷಿö್ಮà ನಗರ ಕೆಂಭಾವಿಯಲ್ಲಿ ಮತ್ತು ಏವೂರು ತಾಂಡಾ (ಬಿ) ಗೃಹ ದಿಗ್ಬಂಧನದಲ್ಲಿರುವ ವಲಸೆಗಾರರು ಮನೆ ಬಿಟ್ಟು ಹೊರಗಡೆ ತಿರುಗಾಡುವುದು ಕಂಡುಬAದಿರುವ ಪ್ರಯುಕ್ತ ಸದರಿ ಆರೋಪಿಗಳ ಮೇಲೆ ಗುನ್ನೆ ನಂಬರ್:0105/2020 ಮತ್ತು 0104/2020 ಕಲಂ: 188, 269, 270ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿವೆ. ಅದೇ ರೀತಿ ವಡಗೇರಾ ತಾಲ್ಲೂಕಿನ ಹೈಯಾಳ (ಬಿ) ಹೋಬಳಿಯ ಹೈಯಾಳ (ಕೆ) ಗ್ರಾಮದ ಆರೋಪಿಗಳ ಮೇಲೆ ಗುನ್ನೆ ನಂಬರ್: 0179/2020 ಕಲಂ: 188ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಮೂರು ಪ್ರಕರಣಗಳು ತನಿಖೆ ಹಂತದಲ್ಲಿರುತ್ತವೆ. ಈ ಆರೋಪಿಗಳನ್ನು ಪುನಃ ಸಾಂಸ್ಥಿಕ ದಿಗ್ಬಂಧನದ ಅವಲೋಕನೆಗಾಗಿ ಇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಗೃಹ ದಿಗ್ಬಂಧನ ಅವಲೋಕನೆಗಾಗಿ ಇರುವ ಜನರು, ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಗೃಹ ದಿಗ್ಬಂಧನದಲ್ಲಿ ಇರತಕ್ಕದ್ದು. ಒಂದು ವೇಳೆ ಗೃಹ ದಿಗ್ಬಂಧನ ಬಿಟ್ಟು ಹೊರಗಡೆ ತಿರುಗಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಅಂತವರನ್ನು ಮತ್ತೆ ಸಾಂಸ್ಥಿಕ ದಿಗ್ಬಂಧನದಲ್ಲಿ ಅವಲೋಕನೆಗಾಗಿ ಇರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss