Sunday, August 14, 2022

Latest Posts

ಯಾದಗಿರಿ| ಜಿಲ್ಲಾಡಳಿತಕ್ಕೆ 10 ಕ್ವಿಂಟಾಲ್ ಅಕ್ಕಿ ನೀಡಿದ ಡಾ. ಅನವಾರ್

ಯಾದಗಿರಿ: ಜಿಲ್ಲೆಯಲ್ಲಿ ಕರೋನಾ ವೈರಸ್ ದಿನ-ದಿನಕ್ಕೆ ವಿಸ್ತಾರವಾಗುತ್ತಿದೆ. ಇದರಿಂದ ಜನರು ಸಂಕಷ್ಟ ಎದರುರಿಸುತ್ತಿದ್ದಾರೆ. ಅವರಿಗೆ ಸಹಾಯಕವಾಗಿ ಎಂಬ ದೃಷ್ಟಿಯಿಂದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಭಗವಂತ ಅನವಾರ್ ಅವರು ವಯಕ್ತಿಯವಾಗಿ ಜಿಲ್ಲಾಡಳಿತಕ್ಕೆ 10 ಕ್ವಿಂಟಾಲ್ ಅಕ್ಕಿ ಮಂಗಳವಾರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಮ್ ಕುರ್ಮಾ ರಾವ ಕೊರೋನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಗಲು-ರಾತ್ರಿ ಶ್ರಮಿಸುತ್ತಿದೆ. ದಾನಿಗಳು ಆಹಾರ ವಸ್ತುಗಳನ್ನು ನೀಡಲು ಮುಂದೆ ಬರಬೇಕು ಅಂದಾಗ ಮಾತ್ರ ನಾವು ಕ್ವಾರೆಂಟೈನ್ ಕೇಂದ್ರಗಳಲ್ಲಿರುವ ಸಾವಿರಾರು ಕಾರ್ಮಿಕರಿಗೆ ಆಹಾರ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ತಸಹೀಲ್ದಾರ ಚನ್ನಮಲ್ಲಪ್ಪ ಘಂಟಿ, ಕಾರ್ಮಿಕ ಇಲಾಖೆ ಯೋಜನಾಧಿಕಾರಿ ರಘುವೀರಸಿಂಗ್ ಠಾಕೂರ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss