Thursday, August 11, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ: ಮತ್ತೆ 66 ಜನರಲ್ಲಿ ಸೋಂಕು ದೃಢ

ಯಾದಗಿರಿ: ಜಿಲ್ಲೆಯಲ್ಲಿ ಮತ್ತೆ 66 ಜನರಲ್ಲಿ ಸೋಂಕು ದೃಡಪಟ್ಟಿದ್ದು, ಒಟ್ಟು 735 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕರಲ್ಲಿ ಸೋಂಕು ಪತ್ತೇಯಾಗಿದ್ದು, ಇವರಲ್ಲಿ ಕೆಲವರು ಕ್ವಾರಂಟೈನ ಅವದಿ ಮುಗಿಸಿ ಮನೆಗೆ ಮರಳಿದವರಿದ್ದಾರೆ ಎಂದು ತಿಳಿದುಬಂದಿದೆ.
ಇವತ್ತು 66 ಜನರಲ್ಲಿ ಕಂಡು ಬಂದಿರುವುದು ಮತ್ತೇ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಯ ತನಕ ತಾಂಡಾಗೆ ಸೀಮಿತವಾಗಿದ್ದ ಸೋಂಕು ಇವತ್ತು ನಗತ ಪ್ರದೇಶಕ್ಕೂ ಹರಡಿದೆ. ಯಾದಗಿರಿ ನಗರದಲ್ಲಿ ಸಹ ಸೋಂಕು ಹರಡಿದ್ದು, ಕೆಲವು ಬಡಾವಣೆಯನ್ನು ಸೀಕಬಂದ್ ಮಾಡಲಾಗಿದೆ. ಕ್ವಾರಂಟೈನ ಅವಧಿ ಮುಗಿಸಿಕೊಂಡ ಮನೆಗೆ ಹೋದ ಜನರಲ್ಲಿ ಸೋಮಕು ಕಂಡುಬಂದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ನಿರಾಕರಿಸುತ್ತಿದ್ದಾರೆ. ಅವರ ನಿರ್ಲಕ್ಷದಿಂದ ಬಹುತೇಕ ಜನತೆಯಲ್ಲಿ ಸೋಂಕು ಹರಡುವ ಭೀತಿ ಗ್ರಾಮೀಣ ಜನತೆಯಲ್ಲಿ ಕಂಡು ಬರುತ್ತಿದೆ. ಒಟ್ಟಾರೆ ಜಲ್ಲಾಡಳಿತದ ನಿರ್ಲಕ್ಷದಿಂದ ಅವಧಿ ಮುಗಿಯುವ ಮುನ್ನ ಬಿಡುಗಡೆ ಮಾಡಲಾಗಿದೆ. ಈಗ ಅವರಲ್ಲಿ ಸೋಂಕು ಕಂಡುಬರುತ್ತಿದ್ದು, ಜನರಲ್ಲಿ ಆತಂಕ ನಿರ್ಮಾಣ ಮಾಡಿದೆ ಎಂದು ವಾರ್ಡ ನಂ 9 ರ ನಗರಸಭೆ ಸದಸ್ಯೆ ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss