Saturday, July 2, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆಗೂ ತಟ್ಟಿದ ಕೊರೋನಾ ಎಫೆಕ್ಟ್!

ಯಾದಗಿರಿ: ಕೊರೊನಾ ಎಫೆಕ್ಟ್ನೊಂದಿಗೆ ಕಂಕಣ ಗ್ರಹಣ ಬಂದ ಕಾರಣ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಮೇಲು ಪರಿಣಾಮ ಬೀರಿದ್ದು ಈಬಾರಿ ಕಂಡು ಬಂದಿತು.
ಮುಂಗಾರು ಪ್ರಾರಂಭದಲ್ಲಿ ಬರುವ ಪ್ರಥಮ ಅಮವ್ಯಾಸೆಯ ದಿನದಂದು ರೈತು ಮಣ್ಣೆತ್ತುಗಳನ್ನು ಪೂಜಿಸುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಜನರು ಹೆಚ್ಚಾಗಿ ಹೊರಗೆ ಬರದೆ ಇರುವುದರಿಂದ ಮಣ್ಣೆತ್ತಿನ ಖರೀದಿಗೂ ಬರ ಕಾಣಿಸಿತು. ಜಿಲ್ಲೆಯ ವಿವಿದ ನಗರ ಪ್ರದೇಶಗಳಲ್ಲಿ ವ್ಯಾಪಾರಕ್ಕೆಂದು ಇಡಲಾಗಿದ್ದ ಮಣ್ಣೆತ್ತು ಖರೀದಿಸುವವರಿಲ್ಲದೆ ಖಾಲಿ ಖಾಲಿ ಕಾಣುತ್ತಿತ್ತು.
ಈಬಾರಿಯ ಮಣ್ಣೆತ್ತಿನ ಅಮಾವಾಸ್ಯೆಯ ಕುರಿತು ಮಣ್ಣೆತ್ತಿನ ವ್ಯಾಪಾರಿ ಆನಂದ ಕುಂಬಾರ ಮಾತನಾಡಿ, ಮಣ್ಣೆತ್ತಿನ ವ್ಯಾಪಾರ ತುಂಬಾ ಡಲ್ಲಾಗಿದೆ. ಪ್ರತಿ ವರ್ಷ ಕನಿಷ್ಠ ಒಂದು ಸಾವಿರ ಜೊತೆ ಮಣ್ಣೆತ್ತುಗಳನ್ನು ಮಾರಲಾಗುತ್ತಿತ್ತು. ಆದರೆ ಈಬಾರಿ ಕೊರೊನಾ ವೈರಸ್ ಹಾವಳಿಯಿಂದ ಜನರು ಮನೆಯಿಂದ ಹೊರಗೆ ಬರದೆ ಹಬ್ಬಕ್ಕೂ ಬಿಸಿ ತಟ್ಟಿದೆ. ಜನರು ಕೊಳ್ಳುತ್ತಾರೆಂದು ಎರಡು ನೂರೈವತ್ತು ಜೊತೆ ಮಣ್ಣೆತ್ತುಗಳನ್ನು ಬೇರೆ ಕಡೆಯಿಂದ ತರಲಾಗಿತ್ತು. ಆದರೆ ಕೊಳ್ಳುವವರಿಲ್ಲದೆ ತಂದ ಅಷ್ಟು ಎತ್ತುಗಳಲ್ಲಿ ಇನ್ನೂ ಹಾಗೆಯೇ ಉಳಿದಿವೆ ಎಂದು ತನ್ನ ಅಳಲನ್ನು ತೋಡಿಕೊಂಡ.
ಇದರ ಮದ್ಯೆಯೆ ಅಲ್ಲಲ್ಲಿ ಜನರು ಮಣ್ಣೆತ್ತುಗಳನ್ನು ಖರೀದಿಸಿ ಖುಷಿಯಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬAತು. ಗ್ರಾಹಕರೊಬ್ಬರನ್ನು ಮಾತನಾಡಿಸಿದಾಗ, ಕೊರೊನಾ ಕಾರಣದಿಂದ ಜನರ ಬಳಿ ಹಣವಿಲ್ಲ. ಆದರೂ ಪ್ರತಿ ವರ್ಷ ಮಣ್ಣೆತ್ತು ತಂದು ಮನೆಯಲ್ಲಿ ಪೂಜೆ ಮಾಡುವ ಸಂಪ್ರದಾಯವಿದೆ. ಆದ್ದರಿಂದ ಒಂದು ಜೊತೆ ಎತ್ತಿಗೆ ನೂರು ರೂಪಾಯಿ ಇದೆ. ಇನ್ನೂ ಬಣ್ಣ ಹಚ್ಚಿದ ಮಣ್ಣೆತ್ತಿನ ಜೋಡಿಗೆ ಇನ್ನೂರೈವತ್ತು ರೂಪಾಯಿ ಇದೆ.ಆದರೂ ಅನಿವಾರ್ಯವಾಗಿ ಖರೀದಿಸಬೇಕಿದೆ ಎಮಭ ಮಾತುಗಳು ಗ್ರಾಹಕರಲ್ಲಿ ಕೇಳಿಬಂದವು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss