ಯಾದಗಿರಿ: ಮಂಗಳವಾರ ಯಾದಗಿರಿ ಜಿಲ್ಲೆಯಲ್ಲಿ ಕೇವಲ 6 ಮಾದರಿಗಳು ದೃಡಪಟ್ಟಿದ್ದು, ಒಟ್ಟು 828 ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟ್ನಲ್ಲಿ ಇಂದು 06 ಜನರಲ್ಲಿ ಸೋಂಕು ದೃಡಪಟ್ಟಿದ್ದು, ಎಲ್ಲರ ಮಹಾರಾಷ್ಟದಿಂದ ಬಂದವರಾಗಿದ್ದಾರೆ. ಮಾದರಿಗಳ ಫಲಿತಾಂಶ ತಡವಾಗಿ ಬರುತ್ತಿರುವ ಕಾರಣ ಕೆಲವರು 14 ದಿನಗಳ ಅವಧಿ ಮುಗಿಸಿ ಮನೆಗೆ ಮರಳಿದ್ದಾರೆ. ಅವರಲ್ಲಿ ಸೋಂಕು ಪತ್ತೆಯಾಗುತ್ತಿಸುವುದು ಜಿಲ್ಲಾಡಳಿತಕ್ಕೆ ತಲೆಬಿಸಿಯಗಿ ಪರಿಣಮಿಸಿದೆ.