Sunday, July 3, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ ಮತ್ತೆ 7 ಜನರಿಗೆ ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 956ಕ್ಕೆ ಏರಿಕೆ

ಯಾದಗಿರಿ: ಜಿಲ್ಲೆಯಲ್ಲಿ ಜುಲೈ 2ರಂದು ಗುರುವಾರ ಒಟ್ಟು 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 956 ಪ್ರಕರಣಗಳ ಪೈಕಿ 854 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ಶಹಾಪುರ ತಾಲ್ಲೂಕಿನ ನಾಯ್ಕಲ್ ಗ್ರಾಮದ 22 ವರ್ಷದ ಮಹಿಳೆ (ಪಿ-16826), ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ 45 ವರ್ಷದ ಪುರುಷ (ಪಿ-16827), ಶಹಾಪುರ ತಾಲ್ಲೂಕಿನ ಹಾಲಭಾವಿ ಗ್ರಾಮದ 60 ವರ್ಷದ ಮಹಿಳೆ (ಪಿ-16828), ಯಾದಗಿರಿಯ ಬಸವೇಶ್ವರ ನಗರದ ಹೊನಗೇರಾ ಮೂಲದ 16 ವರ್ಷದ ಬಾಲಕ (ಪಿ-16829), ಯಾದಗಿರಿಯ ಬಸವೇಶ್ವರ ನಗರದ ಹೊನಗೇರಾ ಮೂಲದ 55 ವರ್ಷದ ಮಹಿಳೆ (ಪಿ-16830), ಗುರುಮಠಕಲ್ನ ಎಜೆಟಿ ಕಾಲೊನಿಯ 45 ವರ್ಷದ ಮಹಿಳೆ (ಪಿ-16831), ಯಾದಗಿರಿ ತಾಲ್ಲೂಕಿನ ಕೂಡ್ಲೂರು ಗ್ರಾಮದ 30 ವರ್ಷದ ಪುರುಷ (ಪಿ-16832) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಪ್ರಕರಣ ಸಂಖ್ಯೆ ಪಿ-16826 ಮತ್ತು ಪಿ-16828 ವ್ಯಕ್ತಿಗಳು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ತೆಲಂಗಾಣ ರಾಜ್ಯದ ಹೈದ್ರಾಬಾದ್ ಹಾಗೂ ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಉಳಿದ 5 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss