ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಅಬ್ಬರ: ಜಲಾವೃತಗೊಂಡ ಜಮೀನುಗಳು!

0
74

ಯಾದಗಿರಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಜಮೀನುಗಳು ಜಲಾವೃತಗೊಂಡು ರೈತರು ಅಪಾರ ಹಾನಿಗೆ ಒಳಗಾಗಿದ್ದರೆ.
ಜಿಲ್ಲೆಯ ವಡಗೇರಾ, ಶಹಾಪೂರ ತಾಲೂಕು ಸೇರಿದಂತೆ ವಿವಿಧ ಭಾಗದಲ್ಲಿ ವಾಡಿಕೆಯ ಮಳೆಗಿಂತಲೂ ಒಂದೇ ದಿನ 300 ಮಿಮೀ ಮಳೆ ಬಂದಿದೆ. ಇದರಿಂದ ಕೆಲವು ಕಡೆ ರಸ್ತೆಗಳು ಕೊಚ್ಚಿಹೋದರೆ, ಇನ್ನೂ ಕೆಲವು ತಗ್ಗು ಪ್ರದೇಶಗಳ ಮನೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮುಂಗಾರು ಮಳೆ ಮುಂಚಿತವಾಗಿ ಬಿದ್ದ ಹಿನ್ನಲೆಯಲ್ಲಿ ರೈತರು ಹೆಸರು ಮತ್ತು ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ. ಆದರೆ ಮಳೆಯಿಂದಾಗಿ ವಡಗೇರಾ ತಾಲೂಕಿನ ಅನೇಕ ಗ್ರಾಮಗಳಲ್ಲಿನ ಜಮೀನುಗಳು ಜಲಾವೃತುಗೊಂಡಿದ್ದು, ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯುವ ಅನುಮಾನ ರೈತರಲ್ಲಿ ಕಾಡಹತ್ತಿದೆ.
ವಾಣಿಜ್ಯ ಬೆಳೆಯನ್ನೆ ನಂಬಿದ ರೈತರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೀಜ ಮತ್ತು ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಈಗ ಬಿದ್ದ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡಿದ್ದರಿAದ ಬಿತ್ತನೆ ಮಾಡಿದ ಬೀಜಗಳು ಮಣ್ಣಿನಲ್ಲಿ ಕೊಳೆತು ಹೋಗುತ್ತವೆ. ಈಗಾಗಲೇ ಕೊರೋನಾ ರೋಗದಿಂದ ತತ್ತರಿಸಿದ ಅನ್ನದಾತರ ಬದುಕಿನ ಮೇಲೆ ಇದು ಬರೆ ಎಳೆದಂತಾಗಿದೆ ಎಂದು ಕುರಿಹಾಳ ಗ್ರಾಮದ ರೈತ ಬಲಭೀಮ ಜೋಶಿ ತಮ್ಮ ಅಳಳನ್ನು ತೋಡಿಕೊಂಡರು.
ಒಟ್ಟಾರೆ ಮುಂಗಾರು ಮಳೆಯ ಅವಾಂತರದಿAದ ಅನ್ನದಾತ ಕಂಗಲಾಗಿದ್ದು, ಬರುವ ದಿನಗಳಲ್ಲಿ ಯಾವ ರೀತಿ ವರುಣನು ಸಹಾಕಾರ ನೀಡುತ್ತಾನೆÀ ಎಂಬುದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here