ಯಾದಗಿರಿ: ಮಹಾಮಾರಿ ಕೊರೋನಾ ಅಟ್ಟಹಾಸ ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆಯುತ್ತಿದೆ. ಇಂದು ಸಾಯಂಕಾಯ ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್ ಬುಲೇಟೀನ್ ಪ್ರಕಾರ ಜಿಲ್ಲೆಯ 52 ಜನರಲ್ಲಿ ಕೊರೋನಾ ಪಾಸಿಟೀವ್ ಕಂಡುಬಂದಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದ ವಲಸಿಗ ಕಾರ್ಮಿಕರೇ ಆಗಿದ್ದಾರೆ.
ಮೂರು ತಿಂಗಳ ಹೆಣ್ಣು ಹಸುಗೂಸು ಸೇರಿದಂತೆ, ಚಿಕ್ಕಮಕ್ಕಳು ಮತ್ತು ವಯಸ್ಕರಲ್ಲಿ ಒಟ್ಟು 52 ಜನರಲ್ಲಿ ಕೋವಿಡ್ ಸೊಂಕು ಕಂಡುಬಂದಿದ್ದು. ಅವರನ್ನು ಯಾದಗಿರಿಯ ನಿಗಧಿತ ಕೋವಿಡ್ ಆಸ್ಪತ್ರೆಗೆ ನಿಗಾವಣೆಯಲ್ಲಿ ಇಡಲಾಗಿದೆ. ಒಟ್ಟು ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 787 ಕ್ಕೆ ಏರಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯು ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದ್ದು. ಇತ್ತೀಚಿಗೆ ಬಂದ ಪಾಸಿಟೀವ್ ಪ್ರಕರಣಗಳು ಎಲ್ಲವೂ ಮಹಾರಾಷ್ಟ್ರದಿಂದ ಬಂದ ವಲಸಿಗ ಕಾರ್ಮಿಕದ್ದೇ ಆಗಿದೆ.
ಮಾಹಾರಾಷ್ಟ್ರದ ವಾಪಾಸಾದ ವಲಸಿಗ ಕಾರ್ಮಿಕರಿಂದಾದ ಕರೋನಾ ಪ್ರಕರಣಗಳ ಹೆಚ್ಚಳವು ಜನರಲ್ಲಿ ಆತಂಕವನ್ನುಂಟುಮಾಡಿದೆ. ಮತ್ತೊಂದೆಡೆ ಕ್ವಾರಂಟೈನ್ ಸೆಂಟರ್ ಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕ್ವಾರಂಟೈನ್ ಕೇಂದ್ರಗಳಿಂದ ಅವಧಿ ಮುಗಿದು ವಾಪಾಸು ಮನೆಗೆ ಬಂದವರಲ್ಲಿ ಪಾಸಿಟೀವ್ ಪ್ರಕರಣದ ವರದಿ ಬರುತ್ತಿರುವುದರಿಂದ, ಮತ್ತೇ ಅವರನ್ನು ಹುಡುಕಿ ಕ್ವಾರಂಟೈನ್ ಮಾಡುವುದು ಜಿಲ್ಲಾಡಳಿತಕ್ಕೆ ತಲೆಬಿಸಿಯಾಗಿದೆ.