Thursday, June 30, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ 13 ಜನರಿಗೆ ಪಾಸಿಟಿವ್, ಕೊರೋನಾ ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆ

ಯಾದಗಿರಿ:  ಜಿಲ್ಲೆಯಲ್ಲಿ ಜೂನ್ 23ರಂದು ಮಂಗಳವಾರ 2 ವರ್ಷದ ಗಂಡುಮಗು ಸೇರಿದಂತೆ ಒಟ್ಟು 13 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 894 ಪ್ರಕರಣಗಳ ಪೈಕಿ 589 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ಸುರಪುರ ತಾಲ್ಲೂಕಿನ ಎ.ಗೋನಾಳ ಗ್ರಾಮದ 45 ವರ್ಷದ ಮಹಿಳೆ (ಪಿ-9633), ಶಹಾಪುರ ತಾಲ್ಲೂಕಿನ ಗೋಗಿ ಪಿ. ಗ್ರಾಮದ 8 ವರ್ಷದ ಬಾಲಕ (ಪಿ-9634), ಶಹಾಪುರ ತಾಲ್ಲೂಕಿನ ಸಗರ ಗ್ರಾಮದ 17 ವರ್ಷದ ಯುವತಿ (ಪಿ-9635), ಸಗರ ಗ್ರಾಮದ 37 ವರ್ಷದ ಪುರುಷ (ಪಿ-9636), ಸಗರ ಗ್ರಾಮದ 14 ವರ್ಷದ ಬಾಲಕ (ಪಿ-9637), ಸಗರ ಗ್ರಾಮದ 11 ವರ್ಷದ ಬಾಲಕ (ಪಿ-9638), ಶಹಾಪುರ ತಾಲ್ಲೂಕಿನ ಕೊಂಗಂಡಿ ಗ್ರಾಮದ 25 ವರ್ಷದ ಮಹಿಳೆ (ಪಿ-9639), ಕೊಂಗಂಡಿ ಗ್ರಾಮದ 13 ವರ್ಷದ ಬಾಲಕ (ಪಿ-9640), ಕೊಂಗಂಡಿ ಗ್ರಾಮದ 15 ವರ್ಷದ ಬಾಲಕಿ (ಪಿ-9641), ಸಗರ ಗ್ರಾಮದ 2 ವರ್ಷದ ಗಂಡುಮಗು (ಪಿ-9642).
ಸಗರ ಗ್ರಾಮದ 46 ವರ್ಷದ ಪುರುಷ (ಪಿ-9643), ಸುರಪುರ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ 40 ವರ್ಷದ ಮಹಿಳೆ (ಪಿ-9644), ಬೊಮ್ಮನಹಳ್ಳಿ ಗ್ರಾಮದ 14 ವರ್ಷದ ಬಾಲಕ (ಪಿ-9645) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಪ್ರಕರಣ ಸಂಖ್ಯೆ ಪಿ-9633ರ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-9634ರ ಬಾಲಕ ಪಿ-6111 ಸಂಪರ್ಕದ ಹಿನ್ನೆಲೆ ಹೊಂದಿದೆ. ಉಳಿದ 11 ಜನ ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss