Wednesday, August 10, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ 72 ಕೊರೊನಾ ಪಾಸಿಟಿವ್ ಪತ್ತೆ: ಡಿಸಿ ಕೂರ್ಮಾ ರಾವ್

ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಮೇ 23ರಂದು ಒಟ್ಟು 72 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. 72 ಜನ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಆಗಮಿಸಿದವರು. ಇವರೆಲ್ಲರನ್ನೂ ನಿಗದಿತ ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.
ಕೋವಿಡ್-19 ತಡೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿದಲ್ಲಿ ಪಾಸಿಟಿವ್ ವ್ಯಕ್ತಿಗಳಿಗೆ ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾದರಿಗಳನ್ನು ಸಂಗ್ರಹಿಸಲು 20 ತಂಡಗಳನ್ನು ರಚಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಸದ್ಯ ಪ್ರತಿದಿನ ಸುಮಾರು 800ರವರೆಗೆ ಮಾದರಿಗಳನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಮಾದರಿಗಳನ್ನು ಪರೀಕ್ಷೆ ಮಾಡಲು ಬೆಂಗಳೂರಿನಲ್ಲಿ ಒಂದು ಲ್ಯಾಬ್ ಕೂಡ ಸರ್ಕಾರ ನಿಗದಿಪಡಿಸಿದೆ. ಇದರಲ್ಲಿ ದಿನಕ್ಕೆ ಸುಮಾರು 1,500 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್-19 ಟೆಸ್ಟ್ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್ ಟೆಸ್ಟ್ ಲ್ಯಾಬ್ ಅನ್ನು ಈಗಾಗಲೇ ಉದ್ಘಾಟನೆ ಮಾಡಲಾಗಿದ್ದು, ಒಟ್ಟು 2 ಟ್ರೂನ್ಯಾಟ್ ಟೆಸ್ಟ್ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್-19 ಆರ್ಟಿಫಿಸಿಯಲ್ ಲ್ಯಾಬ್ ಸ್ಥಾಪನೆಗೆ ಕೂಡ ಕ್ರಮ ಕೈಗೊಳ್ಳಲಾಗಿದ್ದು, ಲ್ಯಾಬ್‌ನ ಉಪಕರಣ ಬಂದ ತಕ್ಷಣ ಪರೀಕ್ಷೆ ನಡೆಸಲಾಗುವುದು. ಆರ್ಟಿಫಿಸಿಯಲ್ ಲ್ಯಾಬ್ ಆರಂಭವಾದಲ್ಲಿ ಕೊರೊನಾ ಪರೀಕ್ಷೆಗಾಗಿ ಬೇರೆ ಕಡೆ ಮಾದರಿ ಕಳುಹಿಸುವುದು ತಪ್ಪುತ್ತದೆ ಎಂದು ಹೇಳಿದರು.
ಜಿಲ್ಲೆಯ ಕೊರೊನಾ ಪಾಸಿಟಿವ್ ವ್ಯಕ್ತಿಗಳನ್ನು ಮುದ್ನಾಳ ಸಮೀಪದ ನೂತನ ಜಿಲ್ಲಾಸ್ಪತ್ರೆ (ಕೋವಿಡ್-19 ಆಸ್ಪತ್ರೆ)ಯಲ್ಲಿ ಅವಲೋಕನೆಗಾಗಿ ಇರಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ 150 ಬೆಡ್‌ಗಳ ವ್ಯವಸ್ಥೆ ಇದ್ದು, ಈ ಪೈಕಿ 32 ಬೆಡ್‌ಗಳಿಗೆ ಹೈಫ್ಲೋ ಆಕ್ಸಿಜನ್ ವ್ಯವಸ್ಥೆ ಇದೆ. ಇನ್ನೂ 100 ಬೆಡ್‌ಗಳಿಗೆ ಹೈಫ್ಲೋ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಹೆಚ್ಚಿನ ಬೆಡ್‌ಗಳ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ಕೋವಿಡ್-19 ಸೌಮ್ಯ ಮತ್ತು ಅತೀ ಸೌಮ್ಯ ಪ್ರಕರಣಗಳಿಗಾಗಿ ಭೀಮರಾಯನಗುಡಿಯಲ್ಲಿ 250 ಬೆಡ್, ಬಂದಳ್ಳಿ ಏಕಲವ್ಯ ಶಾಲೆಯಲ್ಲಿ 200 ಬೆಡ್, ಸುರಪುರ ನಿಷ್ಠಿ ಕಾಲೇಜಿನಲ್ಲಿ ಕೂಡ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಸಾರ್ವಜನಿಕರಲ್ಲಿ ಆತಂಕ ಅಥವಾ ಭಯ ಬೇಡ ಎಂದು ಅವರು ತಿಳಿಸಿದರು.
ಕೊರೊನಾ ತಡೆಗಾಗಿ ವೈದ್ಯರು ಮತ್ತು ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಲು ಈಗಾಗಲೇ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ವೈದ್ಯರು ಮತ್ತು ತಜ್ಞ ವೈದ್ಯರು ನೇರವಾಗಿ ಸಂಪರ್ಕಿಸಿದರು ಸಹ ತಕ್ಷಣ ನೇಮಕ ಮಾಡಿಕೊಳ್ಳಲಾಗುವುದು. ಕೊರೊನಾ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು ಸ್ಯಾರಿ, ಐಎಲ್‌ಐ ಮತ್ತು ಕೋವಿಡ್-19 ಶಂಕಿತರ ವರದಿಗಳನ್ನು hಣಣಠಿs://ಞಠಿme.ಞಚಿಡಿಟಿಚಿಣಚಿಞಚಿ.ಣeಛಿh ಮೂಲಕ ಪ್ರತಿದಿನ ತಪ್ಪದೇ ಎಂಟ್ರಿ ಮಾಡಲು ಮತ್ತು ಎಲ್ಲಾ ಚಿಲ್ಲರೆ ಔಷಧ ವ್ಯಾಪಾರಿಗಳು ಜ್ವರ, ಅಲರ್ಜಿ, ಕೆಮ್ಮು ಮತ್ತು ಸ್ಯಾರಿ/ ಐಎಲ್‌ಐ ಗಳಿಗೆ ಸಂಬAಧಿಸಿದ ಔಷಧಗಳನ್ನು ಮಾರಾಟ ಮಾಡಿದ ವಿವರಗಳನ್ನು hಣಣಠಿs://ಠಿhಚಿಡಿmಚಿ.ಞಚಿಡಿಟಿಚಿಣಚಿಞಚಿ.ಣeಛಿh ಮೂಲಕ ಪ್ರತಿದಿನ ತಪ್ಪದೇ ಎಂಟ್ರಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹೊರ ರಾಜ್ಯಗಳಿಂದ ಯಾದಗಿರಿ ಜಿಲ್ಲೆಗೆ ಯಾರೇ ಬಂದರೂ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗುತ್ತದೆ. ಹೊರ ರಾಜ್ಯಗಳಿಂದ ಬಂದವರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬಹುದು. ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಜನಪ್ರತಿನಿಧಿಗಳು, ಮಾಧ್ಯಮ, ಸಂಘ-ಸAಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಅವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss