Friday, August 12, 2022

Latest Posts

ಯಾದಗಿರಿ ಜಿಲ್ಲೆಯ ಜೀವ ನದಿಗಳಲ್ಲಿ ಪ್ರವಾಹ ಇಳಿಮುಖ: ಸಹಜ ಸ್ಥಿತಿಯತ್ತ ಜನಜೀವನ

ಯಾದಗಿರಿ : ಜಿಲ್ಲೆಯ ಎರಡು ನದಿಗಳಲ್ಲಿ ಪ್ರವಾಹದಲ್ಲಿ ಇಳಿಮುಖ ಕಂಡುಬಂದಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರುಳುತ್ತಿದೆ.
ಕಾಳಜಿ ಕೇಂದ್ರಗಳಲ್ಲಿದ್ದ ಜನರು ತಮ್ಮ ತಮ್ಮ ಮನೆಗೆಳಿಗ ಹಿಂತಿರುಗುತ್ತಿದ್ದಾರೆ. ಆದರೆ ಮನೆಯಲ್ಲಿ ಜಲಾವೃತ್ತಗೊಂಡ ಕಾರಣ ಬಹುತೆಕ ಸಾಮಗ್ರುಗಳು ಮತ್ತು ದವಸ ದಾನದಯಗಳು ಹಾಳಾಗಿ ಹೋಗಿದ್ದು ಅವರನ್ನು ಚಿಂತೆಯಲ್ಲಿ ಮುಳಗಿಸಿದೆ ೆಂದರೆ ತಪ್ಪಾಗಲಿಕ್ಕಿಲ್ಲ
ಭೀಮಾ ಮದಿಯಲ್ಲಿ ಎಂದು ಕಂಡರಿಯದ ಪ್ರಮಾಣದಷ್ಟು ಪ್ರವಾಹ ಈ ಸಲ ಕಂಡುಬಂದು ಅಪಾರ ಹಾನಿ ಮಾಡಿದೆ. ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆಗಳೆಲ್ಲ ನೀರು ಪಾಲಾಗಿದ್ದು, ಭತ್ತ ನೆಲಕಚ್ಚಿದೆ. ಇದರಿಂದ ಸಾಲ ಸೂಲ ಮಾಡಿ ಕೃಷಿ ಕೈಗೊಂಡ ಅನ್ನದಾತರು ಮುಂದೆ ಹೇಗೆ ಎಂಬ ಆತಂಕದಲ್ಲಿದ್ದಾರೆ.
ರಾಜ್ಯ ಸರಕಾರ ಜಿಲ್ಲೆಯ ಪರಿಹಾರಕ್ಕಾಗಿ 15 ಕೋಟಿ ರೂಗಳನ್ನು ನೀಡಿದೆ. ಅದು ಎಷ್ಟರ ಮಟ್ಟಿಗೆ ಅಧಿಕಾರಿಗಳು ಪ್ರಮಾಣಿಕವಾಗಿ ಸಂತ್ರಸ್ತರಿಗೆ ಮುಟ್ಟಿಸುತ್ತಾರೆ ಎಂಬುದು ಈಗಿನ ಪ್ರಶ್ನೆಯಾಗಿದೆ.
ಕಳೆದ ನಾಲ್ಕು ತಿಂಗಳಗಳಿಂದ ಪ್ರವಾಹ ಮತ್ತು ಅಧಿಕ ಮಳೆಯಲ್ಲಿ ಸಿಲುಕಿದ ರೈತರು ಅಪಾರ ಹಾನಿಗೊಳಗಾಗಿದ್ದಾರೆ. ಈಗಾಗಲೇ ಹಿಂದೆ ಘೋಷಣೆ ಮಾಡಿದ ಪರಿಹಾರ ಇನ್ನೂ ರೈತರಿಗೆ ತಲುಪಿಲ್ಲ. ಈಗಲಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂಧಿಸುತ್ತಾರೆ ಎಂಬುದು ಕಾದು ಕುಳಿತಿದ್ದಾರೆ.
ನಾಯ್ಕಲ್ ಗ್ರಾಮದ ಅಬ್ದುಲ್ ರಷೀದ್ ಮತ್ತು ಸಾಬೇರ್ ಬೇಗಂ ದಂಪತಿಗೆ 8 ಜನ ಮಕ್ಕಳು. ಈ ದಂಪತಿ ನವೆಂಬರ್ ತಿಂಗಳಲ್ಲಿ ತಮ್ಮ ಹಿರಿಯ ಮಗಳ ಮದುವೆ ನಿಶ್ಚಯ ಮಾಡಿದ್ದರು. ಮಗಳ ಮದುವೆಗೆ ಸಾಲ ಮಾಡಿ ಹಣ ಹೊಂದಿಸಿ, ಬಟ್ಟೆ-ಬರೆ, ಪಾತ್ರೆ ಸೇರಿದಂತೆ ಎಲ್ಲಾ ವಸ್ತುಗಳನ್ನು ಖರೀದಿಸಿ ಮನೆಯಲ್ಲಿಟ್ಟಿದ್ರು.
ಆದ್ರೆ, ಭೀಮಾ ನದಿ ಪ್ರವಾಹದಿಂದ ಮನೆಗೆ ನೀರು ನುಗ್ಗಿದ ಪರಿಣಾಮ ಮದುವೆಗೆ ಖರೀದಿಸಿದ್ದ ಅಗತ್ಯ ಸಾಮಗ್ರಿಗಳು ನೀರು ಪಾಲಾಗಿವೆ. ಮದುವೆಯ ಸಂಭ್ರಮದಲ್ಲಿರಬೇಕಿದ್ದ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ತಮಗಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಅಂತಾ ನೊಂದ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ತಮ್ಮ ಬಳಿಯಿದ್ದ 2 ಲಕ್ಷ ರೂ. ಜೊತೆಗೆ 3 ಲಕ್ಷ ರೂ. ಬಡ್ಡಿ ಸಾಲ ಪಡೆದುಕೊಂಡು ಮಗಳ ಮದುವೆಗೆ ಏರ್ಪಾಡು ಮಾಡಿದ್ರು. ಆದ್ರೆ, ಭೀಮಾ ನದಿಯ ಆರ್ಭಟಕ್ಕೆ ಮನೆಯಲ್ಲಿದ್ದ ದವಸ-ಧಾನ್ಯಗಳು, ಮಗಳಿಗೆ ಕೊಡಲು ಖರೀದಿಸಿದ್ದ ಮಂಚ, ಪಾತ್ರೆ ಸೇರಿ ವಿವಿಧ ಅಗತ್ಯ ವಸ್ತುಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿವೆ.
ಇದು ಒಂದು ಕುಟುಂಬದ ಸಮಸ್ಯೆಯಲ್ಲ. ಇಂತಹ ಅನೇಕ ಸಮಸ್ಯೆಗಳು ಪ್ರವಾಹಪೀಡಿತ ಗ್ರಾಮಗಳಲ್ಲಿ ಕಂಡುಬರುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಹಾನಿಯ ಬಗ್ಗೆ ತಿಳಿಯಲಿದೆ.
ಒಟ್ಟಾರೆ ನದಿಗಳಲ್ಲಿ ಪ್ರವಾಹ ಿಲೀಮುಖವಾಗಿದ್ದು ಜಿಲ್ಲೆಯ ಜನರಲ್ಲಿ ನಿರಾಳತೆ ಕಂಡುಬರುತ್ತಿದೆ. ಜಿಲ್ಲಾಡಳಿತ ಮತ್ತು ಕೃಷಿ ಅಧಿಕಾರಿಗಳು ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಿದಲ್ಲಿ ಅನ್ನದಾತರ ಬದಕಿನಲ್ಲಿ ನೆಮ್ಮದಿ ಕಾಣಬಹುದು ಇಲ್ಲವಾದಲ್ಲಿ ಅವರ ಬದಕು ಮುರಾಬಟ್ಟೆಯಾಗಿ ಬೀದಿ ಪಾಲಾಗುತ್ತದೆ ಎಂಬುದು ರೈತ ಮುಖಂಡರ ಅಭಿಮತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss