ಯಾದಗಿರಿ: ನೋವೆಲ್ ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ್ದ ಮಾದರಿಗಳ ಪೈಕಿ ಶುಕ್ರವಾರ 324 ಮಾದರಿಗಳ ವರದಿ ನೆಗೆಟಿವ್ ಬಂದಿದ್ದು, ಮೇ 22ರವರೆಗೆ ಒಟ್ಟು 2,821 ಮಾದರಿಗಳ ವರದಿ ನೆಗೆಟಿವ್ ಬಂದAತಾಗಿದೆ. ಶುಕ್ರವಾರ ಕಳುಹಿಸಲಾದ 756 ಹೊಸ ಮಾದರಿಗಳು ಸೇರಿದಂತೆ 2,727 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ ಪಿ-867, ಪಿ-868, ಪಿ-1139, ಪಿ-1140, ಪಿ-1141, ಪಿ-1187, ಪಿ-1188, ಪಿ-1189, ಪಿ-1190, ಪಿ-1191, ಪಿ-1192, ಪಿ-1256, ಪಿ-1448, ಪಿ-1733, ಪಿ-1743 ಒಟ್ಟು 15 ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿರುತ್ತದೆ.
ಹೊಸ ಜಿಲ್ಲಾಸ್ಪತ್ರೆಯ ಐಸೊಲೇಷನ್ ವರ್ಡ್ನಲ್ಲಿ 23 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಎಸ್ಐಸಿ ನಲ್ಲಿ 6 ಜನರನ್ನು, ಸುರಪುರ ಸೂಪರ್ ಕ್ವಾರಂಟೈನ್ ಸೆಂರ್ನಲ್ಲಿ 53 ಮತ್ತು ಏಕಲವ್ಯ ಕೊರೊನಾ ಕೇರ್ ಸೆಂರ್ನಲ್ಲಿ 50 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 158 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 738 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 3 ಕಂಟೇನ್ಮೆAಟ್ ಝೋನ್ಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.