ಯಾದಗಿರಿ: ಭಾರತೀಯ ಹತ್ತಿ ನಿಗಮದ ವತಿಯಿಂದ ಶಹಾಪುರ ತಾಲ್ಲೂಕಿನ 3 ಮಿಲ್ಗಳಲ್ಲಿ ನಡೆಯುತ್ತಿರುವ ಹತ್ತಿ ಖರೀದಿ ಪ್ರಕ್ರಿಯೆಯನ್ನು ಜೂನ್ 25ರಿಂದ 30ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಶಹಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಕಾರಣ ಕಾರ್ಖಾನೆಯಲ್ಲಿನ ಹತ್ತಿ ಜಿನ್ನಿಂಗ್ ಕಾರ್ಯವು ತುಂಬಾ ವಿಳಂಬವಾಗುತ್ತಿದೆ. ಇದರಿಂದಾಗಿ 3 ಮಿಲ್ಗಳಲ್ಲಿ ಹತ್ತಿಯು ತುಂಬಿ ಹೋಗಿರುತ್ತದೆ. ಕಾರಣ ಹೊಸದಾಗಿ ಹತ್ತಿ ಖರೀದಿಸಲು ಸ್ಥಳಾವಕಾಶ ಇರುವುದಿಲ್ಲವಾದ್ದರಿಂದ ಹತ್ತಿ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಹಾಗೂ ಜುಲೈ 1ರಿಂದ ಪುನಃ ಹತ್ತಿ ಖರೀದಿ ಪ್ರಕ್ರಿಯಯು ಪ್ರಾರಂಭಿಸಲಾಗುವುದು ಎಂದು ಭಾರತೀಯ ಹತ್ತಿ ನಿಗಮದ ವ್ಯವಸ್ಥಾಪಕರು ತಿಳಿಸಿರುತ್ತಾರೆ. ಆದ್ದರಿಂದ ರೈತ ಬಾಂಧವರು ಸಹಕರಿಸಲು ಕೋರಲಾಗಿದೆ.