Thursday, August 11, 2022

Latest Posts

ಯಾದಗಿರಿ| ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಅಂತರ ರಾಜ್ಯಗಳ ಬಸ್ ಸಂಚಾರ ಪ್ರಾರಂಭ

ಯಾದಗಿರಿ : ಕೋವಿಡ್- 19 ವೈರಸ್ ಹರಡುವಿಕೆ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಆರೋಗ್ಯ ಸುರಕ್ಷತೆಯ ಹಿತದೃಷ್ಟಿಯಿಂದ ಲಾಕ್‍ಡೌನ್ ಅವಧಿಯಲ್ಲಿ ಅಂತರ ರಾಜ್ಯ ಸಾರಿಗೆಗಳನ್ನು ಸರ್ಕಾರದ ನಿರ್ದೇಶನದ ಮೇರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಸಾರಿಗೆ ಬಸ್‍ಗಳನ್ನು, ಸರ್ಕಾರ ಲಾಕ್‍ಡೌನ್ ತೆರವು ಗೊಳಿಸಿದ ಮೇಲೆ ರಾಜ್ಯದಲ್ಲಿ ಸೇರಿದಂತೆ ನೆರೆಯ ಅಂತರ ರಾಜ್ಯ ಸಾರಿಗೆ ಪ್ರಾರಂಭಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶ ರಾಜ್ಯಗಳಲ್ಲಿ ಸಾರಿಗೆಗಳನ್ನು ಕಾರ್ಯಚರಣೆ ಮಾಡಲು ಸೂಚಿಸಿರುವ ಪ್ರಯುಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ರಾಜ್ಯಗಳಲ್ಲಿ ಕಾರ್ಯಚರಣೆಯಲ್ಲಿರುವ ಸಾರಿಗೆಗಳಾದ ಯಾದಗಿರಿ- ಸೋಲಾಪುರ, ಶಹಾಪೂರ-ಸೋಲಾಪುರ, ಸುರಪೂರ-ಸೋಲಾಪುರ, ಶಹಾಪೂರ- ಮಹಾನಂದಿ, ಶಹಾಪುರ- ಪಣಜಿ ಸಾರಿಗೆಗಳನ್ನು ಸೆಪ್ಟೆಂಬರ್ 16 ರಿಂದ ಜಾರಿಗೆ ಬರುವಂತೆ ಈ ಮೂಲಕ ಕಾರ್ಯಚರಣೆಯಲ್ಲಿರುವ ಸಮಯದಂತೆ ಪ್ರಾರಂಭಿಸಿ ಕಾರ್ಯಚರಣೆ ಮಾಡಲಾಗುತ್ತದೆ
ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss