ಯಾದಗಿರಿ: ಮರಳು ಹೊತ್ತ ಲಾರಿಗಳೆರಡು ವೇಗದ ನಿಯಂತ್ರಣ ತಪ್ಪಿ, ಹಿಂಬದಿಯಿoದ ಡಿಕ್ಕಿ ಹೊಡೆದು ಪರಿಣಾಮ ಚಾಲಕ ಮೃತಪಟ್ಟ ಘಟನೆ ಶಹಾಪುರ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ನಡೆದಿದೆ.
ಮರಳು ತುಂಬಿಕೊoಡು ಕಲಬುರ್ಗಿಗೆ ಹೋಗುವಾಗ ಒಂದೆ ಮಾಲಿಕನಿಗೆ ಸೇರಿದ ಏರೆಡು ಲಾರಿಗಳು ಶಹಾಪುರ ನಗರದೊಳಗೆ ಹಾಯ್ದು ಬರುತ್ತಿದ್ದಾಗ ವೇಗದ ನಿಯಂತ್ರಣದಿoದ ತಪ್ಪಿ ಹಿಂಬದಿಯಿoದ ಬಂದು ಡಿಕ್ಕಿ ಹೊಡೆಯಿತು.
ಲಾರಿಯ ಮುಂಬಾಗ ಜಖಂಗೊoಡು ಶರಣಪ್ಪ ತಂ ಸಿದ್ರಾಮಪ್ಪ ಮನಗನಾಳ,[45] ಎನ್ನವ ಚಾಲಕ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಲಾರಿ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.