Thursday, August 11, 2022

Latest Posts

ಯಾದಗಿರಿ| ಪಡಿತರ ಚೀಟಿ ಇಲ್ಲದಿದ್ದರೂ ಆಹಾರ ಧಾನ್ಯ ವಿತರಿಸಿ: ಸಚಿವ ಕೆ.ಗೋಪಾಲಯ್ಯ

ಯಾದಗಿರಿ: ಲಾಕ್ ಡೌನ್ ಕಾರಣ ಜಿಲ್ಲೆಗೆ ವಾಪಸ್ಸಾದ ವಲಸೆ ಕರ‍್ಮಿಕರಿಗೆ ಪಡಿತರ ಚೀಟಿ ಇಲ್ಲದಿದ್ದರೂ ಅವರ ಆಧಾರ್ ಕಾಡ್೯ ಮೂಲಕ ಆಹಾರ ಧಾನ್ಯ ವಿತರಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಗೋಪಾಲಯ್ಯ ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ಆತ್ಮ ನರ‍್ಭರ್ ಭಾರತ್ ಯೋಜನೆಯಡಿ ಪಡಿತರ ವಿತರಣೆಯ ಸರ‍್ಪಕ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿ, ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಪಡಿತರ ತಲುಪುವ ಉದ್ದೇಶದಿಂದ ಕೇಂದ್ರ ಸರಕಾರವು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ರಾಜ್ಯಕ್ಕೆ ಪಡಿತರ ಆಹಾರ ಧಾನ್ಯ ಬಿಡುಗಡೆ ಮಾಡಿದೆ. ಹೊರ ರಾಜ್ಯದಿಂದ ಹಾಗೂ ಬೇರೆ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ವಾಪಸ್ಸಾದ ಕಾರ್ಮಿಕರಿಗೆ ಆಧಾರ್ ಕಾಡ್೯ ಮುಖಾಂತರ ೧೦ ಕೆ.ಜಿ ಅಕ್ಕಿ ಹಾಗೂ ಎರಡು ಕೆ.ಜಿ ಬೇಳೆ ವಿತರಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ೪೦ ಲಕ್ಷ ಜನರಿಗೆ ಆಹಾರ ಧಾನ್ಯ ವಿತರಿಸುವ ಗುರಿಯಿದ್ದು, ನ್ಯಾಯಬೆಲೆ ಅಂಗಡಿಗಳಿಂದ ದೂರವಿರುವ ಹಳ್ಳಿಗಳಿಗೆ ತೆರಳಿ ಪಡಿತರ ಧಾನ್ಯ ವಿತರಿಸಬೇಕು. ಹೆಚ್ಚಿನ ಪಡಿತರ ಧಾನ್ಯದ ಅವಶ್ಯಕತೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ನರ‍್ದೇಶನ ನೀಡಿದ ಸಚಿವರು, ಗುಣಮಟ್ಟದ ಆಹಾರ ಧಾನ್ಯ ಸರಬರಾಜು ಮಾಡದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚಿರಿಕೆ ನೀಡಿದರು.
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಮತ್ತು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಮೂರು ತಿಂಗಳವರೆಗೆ ಉಚಿತ ಗ್ಯಾಸ್ ನೀಡಲಾಗಿದೆ. ವಿಶೇಷವಾಗಿ ಯಾದಗಿರಿ ಜಿಲ್ಲೆಗೆ ೨,೫೦೦ ಗ್ಯಾಸ್ ಕನೆಕ್ಷನ್ನ್ನು ಹೆಚ್ಚುವರಿಯಾಗಿ ಕೊಡಲಾಗಿದ್ದು, ಅದನ್ನು ಬಡವರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆಹಾರ ಧಾನ್ಯ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಗೋದಾಮು ನರ‍್ಮಾಣ ಮಾಡಲು ೫ ಎಕರೆ ಜಮೀನು ಮಂಜೂರು ಮಾಡಿ ರ‍್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಇರುವ ನ್ಯಾಯಬೆಲೆ ಅಂಗಡಿಗಳ ಅಂತರ ಹೆಚ್ಚಿದೆ. ಇದರಿಂದ ಪಡಿತರ ಚೀಟಿದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಇನ್ನೂ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳಿಗೆ ಅನುಮತಿ ನೀಡಲು ಕೋರಿದರು.
ಜಿಲ್ಲಾಧಿಕಾರಿಗಳಾದ ಎಂ.ಕರ‍್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ ಹೊಸದಾಗಿ ರ‍್ಜಿ ಸಲ್ಲಿಸಿದ ಮತ್ತು ರದ್ದುಪಡಿಸಿದ ಪಡಿತರ ಚೀಟಿಗಳ ಫಲಾನುಭವಿಗಳಿಗೂ ಕೂಡ ಕೋವಿಡ್-೧೯ ತರ‍್ತು ಪರಿಸ್ಥಿತಿ ಸಂಬಂಧ ಪಡಿತರ ವಿತರಣೆ ಮಾಡಲಾಗುತ್ತಿದೆ. ತರ‍್ತು ಪರಿಸ್ಥಿತಿ ಸಂಬಂಧ ಎಸ್ಡಿಆರ್ಎಫ್ ಅನುದಾನ ಕೂಡ ಬಳಸಿಕೊಂಡು ಪಡಿತರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಆಹಾರ ಇಲಾಖೆ ಉಪ ನರ‍್ದೇಶಕರಾದ ದತ್ತಪ್ಪ ಕಲ್ಲೂರ ಅವರು ಮಾತನಾಡಿ, ರಾಜ್ಯ ಸರಕಾರದಿಂದ ಆನ್ಲೈನ್ನಲ್ಲಿ ಪಡಿತರ ಚೀಟಿಗಾಗಿ ರ‍್ಜಿ ಸಲ್ಲಿಸಿರುವ ೪೯೬೧ ಆದ್ಯತಾ (ಬಿ.ಪಿ.ಎಲ್) ಕುಟುಂಬಕ್ಕೆ ೧೦ ಕೆ.ಜಿ ಅಕ್ಕಿ ಉಚಿತವಾಗಿ ಮತ್ತು ಅರ್ಜಿ ಸಲ್ಲಿಸಿರುವ ೧೪೬ ಆದ್ಯತೇತರ ಕುಟುಂಬಕ್ಕೆ ೧ ಕೆ.ಜಿ ಗೆ ೧೫ ರೂ.ನಂತೆ ೧೦ ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ರಾಜ್ಯ ರ‍್ಕಾರದಿಂದ ಆದ್ಯತೇತರ ಇಚ್ಚೆ ವ್ಯಕ್ತಪಡಿಸದ ೬೦೮೯ ಪಡಿತರ ಚೀಟಿಗಳಿಗೆ ೧ ಕೆ.ಜಿ ಗೆ ೧೫ ರೂ. ನಂತೆ ೧೦ ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇಚ್ಚೆ ವ್ಯಕ್ತಪಡಿಸಿರುವ ೯,೩೮೯ ಆದ್ಯತೇತರ ಪಡಿತರ ಚೀಟಿದಾರರಿಗೆ ೧ ಕೆ.ಜಿ ಗೆ ೧೫ ರೂ.ನಂತೆ ೧೦ ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಲೋಪದೋಷ ಎಸಗಿರುವ ಕಾರಣ ೫ ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಿ ಕ್ರಮ ಜರುಗಿಸಲಾಗಿದೆ ಎಂದು ಅಂಕಿ-ಅಂಶಗಳ ವರದಿ ನೀಡಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಉಜ್ವಲಾ ಯೋಜನೆಯಡಿ ಏಪ್ರಿಲ್ ಮಾಹೆಯಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಜೂನ್ ೯ರವರೆಗೆ ೧,೪೯,೬೯೭ ರಿಫೀಲ್ ಗ್ಯಾಸ್ ಸಿಲಿಂಡರ್ನ್ನು ವಿತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ೧ ಸಿಲಿಂಡರ್ ರಂತೆ ಏಪ್ರಿಲ್, ಮೇ ಮತ್ತು ಜೂನ್ ಮಾಹೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಶಿಲ್ಪಾ ರ‍್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss