Wednesday, July 6, 2022

Latest Posts

ಯಾದಗಿರಿ| ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನ್ ಅತುಲ ಭೇಟಿ, ಪರಿಶೀಲನೆ

ಕೆಂಭಾವಿ(ಯಾದಗಿರಿ ) : ಪಟ್ಟಣದ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಶನಿವಾರ ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನ್ ಅತುಲ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಕೇಂದ್ರ ಹೊರತುಪಡಿಸಿ ಅತೀ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಪಟ್ಟಣದ ವಿವಿಧ ಪರೀಕ್ಷಾ ಕೇಂದ್ರಗಳ ಸ್ಥಿತಿಗತಿ ಕುರಿತು ಖುದ್ದು ಅವಲೋಕನ ಮಾಡಿದ ಅಪರ ಆಯುಕ್ತರು, ಕೊರೊನಾ ಮುಂಜಾಗೃತಾ ಬಗ್ಗೆ ಕೈಗೊಂಡ ಕ್ರಮಗಳು, ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೇಸರ್, ಶಾಲೆಗಳ ಸ್ವಚ್ಚತೆ ಬಗ್ಗೆ ಮಾಹಿತಿ ಪಡೆದರು.
ಆರು ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಕುರಿತು ಪರೀಕ್ಷಾ ಮೇಲ್ವಿಚಾರಕರಿಂದ ಮಾಹಿತಿ ಪಡೆದ ಅವರು, ಯಾವುದೆ ಕಾರಣಕ್ಕೂ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದÀರು. ಮುಂಬರುವ ಪರೀಕ್ಷೆಯಲ್ಲಿ ಯಾವುದೆ ಅಕ್ರಮ ಕಂಡುಬAದರೆ ಅಂತ ಪರೀಕ್ಷಾ ಮೇಲ್ವಿಚಾರಕರು ಮತ್ತು ಕೋಣೆಯ ಮೇಲ್ವಿಚಾರಕರನ್ನು ತಕ್ಷಣದಿಂದಲೆ ಅಮಾನತ್ತು ಮಾಡುವಂತೆ ಸ್ಥಳದಲ್ಲಿದ್ದ ಬಿಇಒ ನಾಗರ‍್ನ ಓಲೇಕಾರ ಅವರಿಗೆ ಖಡಕ್ ಸೂಚನೆ ನೀಡಿದರು.
ಮುಖ್ಯೋಪಾಧ್ಯಾಯರ ಬದಲಾವಣೆ
ಪಟ್ಟಣದ ಪಧವಿ ಪೂರ್ವ ಕಾಲೇಜಿನ ಹತ್ತನೇ ತರಗತಿ ಪರೀಕ್ಷಾ ಕೇಂದ್ರಕ್ಕೆ ಪೂರ್ವಭಾವಿ ಸಭೆಗೆ ಹಾಜರಾದಂತಹ ಶಿಕ್ಷಕರಿಗೆ ಕೊರೊನಾ ಪಾಜಿಟಿವ ಬಂದಿದೆ. ಆ ಶಿಕ್ಷಕರು ಸದ್ಯ ನಡೆಯುತ್ತಿರುವ ಪರೀಕ್ಷಾ ಮುಖ್ಯಸ್ಥರನ್ನು ಮುಖಾಮುಖಿ ಬೇಟಿಯಾಗಿ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ ಆ ಮುಖ್ಯ ಶಿಕ್ಷಕರನ್ನು ಇಂದು ಪರೀಕ್ಷಾ ಕೇಂದ್ರದಿAದ ಬಿಡುಗಡೆಗೊಳಿಸಿ ಹೋಂ ಕ್ವಾರೈಂಟನಗೆ ಕಳುಹಿಸಲಾಗಿದೆ. ವಜ್ಜಲ ಪ್ರೌಡಶಾಲೆಯ ಹುಣಸಗಿ ಸೀಲ್‌ಡೌನ ಪ್ರದೇಶದಲ್ಲಿದ್ದ ಕಾರಣ ಅವರನ್ನು ಬದಲಾವಣೆ ಮಾಡಲಾಗಿದೆ. ಆ ಸ್ಥಳಕ್ಕೆ ಬೇರೆ ಮುಖ್ಯೋಪಾಧ್ಯಯರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೋಲಿಸರಿಗೆ ವಾರ್ನಿಂಗ್
ಪಟ್ಟಣದಲ್ಲಿರುವ ಆರು ಪರೀಕ್ಷಾ ಕೇಂದ್ರಗಳನ್ನು ಬೇಟಿ ನೀಡಿ ಪರಿಶೀಲನೆ ಮಾಡುವಾಗ ಪರೀಕ್ಷಾ ಕೇಂದ್ರದ ಸುತ್ತಮುತ್ತ ಬೈಕ ಹಾಗೂ ಖಾಸಗಿ ವಾಹನಗಳ ಓಡಾಟ, ಅಶಿಸ್ತು ಕಂಡು ಬಂದ ಹಿನ್ನಲೆಯಲ್ಲಿ ಪೇದೆಯೊಬ್ಬರಿಗೆ ರಸ್ತೆಯಲ್ಲಿ ಕಾರು ನಿಲ್ಲಿಸಿ ಕ್ಲಾಸ್ ತೆಗೆದುಕೊಂಡ ಘಟನೆಯೂ ಜರುಗಿತು.
ಚೆನ್ನಬಸವಣ್ಣ ಮುಧೋಳ, ಬಸವರಾಜ ಅವರಾದಿ ತಂಡದಲ್ಲಿದ್ದರು. ಬಿಇಒ ನಾಗರತ್ನಾ ಓಲೇಕಾರ, ಪುರಸಭೆ ಮುಖ್ಯಾಧಿಕಾರಿ ದೇವೇಂದ್ರ ಹೆಗಡೆ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss