ಯಾದಗಿರಿ : ರೈತರು ತಮ್ಮ ತಮ್ಮ ಹೊಲಗಳಲ್ಲಿ ಅಥವಾ ಮನೆಯ ಹತ್ತಿರ ಖಾಲಿ ಇರುವ ಜಾಗದಲ್ಲಿ ಕೈತೋಟದಲ್ಲಿ ತರಕಾರಿ ಕಾಯಿಪಲ್ಯಗಳನ್ನು ಬೆಳೆಯುವುದರಿಂದ ಕುಟುಂಬಕ್ಕೆ ಬೇಕಾಗಿರುವ ತರಕಾರಿಗಳನ್ನು ಬೆಳೆದುಕೊಂಡು ಕುಟುಂಬದ ಖರ್ಚುನ್ನು ಕಡಿಮೆ ಮಾಡಿಕೊಳ್ಳಹುದು. ಕೃಷಿ ವಿಜ್ಞಾನ ಕೇಂದ್ರದಿಂದ ಕೃಷಿ ತಂತ್ರಜ್ಞಾನವನ್ನು ಅರಿತು ಲಾಭ ಪಡೆದುಕೊಳ್ಳಬೇಕು ಎಂದು ಬೀಮರಾಯನಗುಡಿ ಕೃಷಿ ವಿಶ್ವವಿದ್ಯಾಲಯ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಬಿ. ಎಸ್. ರೆಡ್ಡಿಅವರು ಹೇಳಿದರು.
ಯಾದಗಿರಿ ಐ.ಸಿ.ಎ.ಆರ್ಕೃಷಿ ವಿಜ್ಞಾನಕೇಂದ್ರ, ಕವಡಿಮಟ್ಟಿ ಹಾಗೂ ಇಪ್ಕೋ ಲಿಮೀಟೆಡ್ಯಾದಗಿರಿ ಇವರ ಸಹಯೋಗದಲ್ಲಿಸೆಪ್ಟೆಂಬರ್16ರಂದು ಪ್ರಧಾನ ಮಂತ್ರಿ ಪೋಷಣಾ ಅಭಿಯಾನ ಮತ್ತು ಪೋಷಣಾ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ವಿಜ್ಞಾನಿಗಳು ಮತ್ತು ಕೃಷಿ ವಿಜ್ಞಾನಕೇಂದ್ರಮುಖ್ಯಸ್ಥಡಾ. ಅಮರೇಶ. ವೈ. ಎಸ್ಅವರುಕಾರ್ಯಕ್ರಮದಅದ್ಯಕ್ಷತೆವಹಿಸಿದ್ದರು. ಹಿರಿಯ ವಿಜ್ಞಾನಿಗಳಾದ ಡಾ. ಅಮರೇಶ. ವೈ. ಎಸ್ಅವರುಮಾತನಾಡಿ, ಹಳ್ಳಿ ಮತ್ತು ಪಟ್ಟಣಗಳಲ್ಲಿ ಚಿಕ್ಕ ಮಕ್ಕಳು ಮತ್ತುರೈತ ,ಮಹಿಳೆಯರಲ್ಲಿ ದೈನದಿಂನಆಹಾರ ಪದ್ದತಿಯಲ್ಲಿ ಪೌಷ್ಠಿಕತೆ ಹೆಚ್ಚಿಸಲುಕೈತೋಟದ ಪಾತ್ರ ಮ್ರಮುಖವಾಗಿರುತ್ತದೆ.ಜಿಲ್ಲೆಯಲ್ಲಿಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚು ಅಪೌಷ್ಠಿಕತೆಕಂಡು ಬಂದಿದ್ದುಇದ್ದನ್ನ ಹೊಗಲಾಡಿಸಲುರೈತರು ಕೈತೋಟಗಳಲ್ಲಿ ತರಕಾರಿಕಾಯಿಪಲ್ಯ, ಹಣ್ಣುಗಳು ಬೆಳಸಿ, ಸೇವಿಸುವುದರಿಂದಅಪೌಷ್ಠಿಕತೆ ನಿವಾರಿಕೊಳ್ಳಬಹುದುಎಂದು ತಿಳಿಸಿದರು.
ವಿಜ್ಞಾನಿ ಡಾ. ಉಮೇಶ ಬಾರಿಕರಅವರು ಮಾತನಾಡಿ, ಮಣ್ಣು ಮತ್ತು ನೀರು ಸಂರಕ್ಷಣೆಗೆರೈತರು ಬೇಸಿಗೆ ಅಥವಾ ಮುಂಗಾರು ಮುಂಚೆ ಮಣ್ಣು ಪರೀಕ್ಷೆ ಮಾಡಿಸಿ ವಿಜ್ಞಾನಿಗಳು ನೀಡಿದ ಸಲಹೆದಂತೆ ಗೊಬ್ಬರಗಳನ್ನು ಹೊಲಗಳಿಗೆ ಹಾಕುವುದರಿಂದಖರ್ಚುನ್ನುಕಡಿಮೆ ಮಾಡಬಹುದುಎಂದುಹೇಳಿದರು.
ತೋಟಗಾರಿಕೆ ವಿಜ್ಞಾನಿ ಡಾ. ಸತೀಶಕುಮಾರ ಮಾತನಾಡಿ,ರೈತರಿಗೆ ವಿವಿಧರೀತಿಯ ಕೈತೋಟಗಳ ವಿನ್ಯಾಸಗಳು ಮತ್ತು ತರಕಾರಿಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನುನೀಡಿದರು.
ವಿಜ್ಞಾನಿ ಡಾ. ಶಾಂತವಿರಯ್ಯಅವರುರೈತರಿಗೆ ಮಳೆಯ ಮುನ್ಸೂಚನೆ ಬಗ್ಗೆ ಮೇಘದೂತ್ಆಪ್ನಲ್ಲಿ 5 ದಿನ ಮುಂಚಿತವಾಗಿದೊರೆಯುವ ಮಾಹಿತಿಯನ್ನು ನೋಡಿ ಕೃಷಿ ಕಾರ್ಯಚಟುವಟಿಕೆಗಳನ್ನು ಮಾಡಬೇಕುಎಂದು ತಿಳಿಸಿದರು.
ಇಪ್ಕೋ ಸಂಸ್ಥೆಯ ಪ್ರತಿನಿಧಿಕೃಷ್ಣಮೂರ್ತಿಅವರು ಮಣ್ಣುಆರೋಗ್ಯ ಹೆಚ್ಚಿಸುವಲ್ಲಿ ರಸಗೊಬ್ಬರಗಳು ಮತ್ತು ಇಪ್ಕೋ ಸಂಸ್ಥೆಯಿಂದದೊರೆಯುವ ರಸಗೊಬ್ಬರಗಳ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿರೈತರಿಗೆತರಕಾರಿ ಬೆಳೆಗಳ ಕಿಟ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿರವಿಚಂದ್ರ ಸಾವುಕಾರ ಆಲದಾಳ, ಹಣಮಂತರಾಯ ಆವಿನಾಳ, ಪ್ರಗತಿಪರರೈತರು,ಕೃಷಿ ವಿಜ್ಞಾನಕೇಂದ್ರದ ಸಿಬ್ಬಂದಿಗಳಾದ ಶಾರುಖಾನ ನಾಡಗೌಡ, ದೇವಿಂದ್ರಪ್ಪ ಪೂಜಾರಿ, ಹಣಮಂತಯಾದವ, ಸುಭಾಸ್ರೆಡ್ಡಿ ಸೇರಿದಂತೆಸುರಪೂರ ತಾಲ್ಲೂಕಿನ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.