Tuesday, August 16, 2022

Latest Posts

ಯಾದಗಿರಿ| ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಸಾರಿಗೆ ಬಸ್‌ಗಳ ಕಾರ್ಯಾಚರಣೆ ಆರಂಭ

ಯಾದಗಿರಿ : ಸರ್ಕಾರ ಮೇ ೧೯ರಿಂದ ಲಾಕ್‌ಡೌನ್ ಸಡಿಲಿಕೆ ಮಾಡಿರುವುದರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗದ ವತಿಯಿಂದ ಭಾನುವಾರ ಹೊರತುಪಡಿಸಿ ಪ್ರಥಮ ಹಂತದಲ್ಲಿ ೧೦೦ ಬಸ್ (ಶೇ ೩೦ರಷ್ಟು)ಗಳು ಕಾರ್ಯಾಚರಣೆ ಮಾಡಲಿವೆ. ನಂತರ ಹಂತಹAತವಾಗಿ ಹೆಚ್ಚಿನ ಸಾರಿಗೆ ಬಸ್‌ಗಳನ್ನು ಪುನರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಗಗಳು: ಯಾದಗಿರಿ ಘಟಕದಿಂದ ಶಹಾಪೂರ, ಸುರಪುರ, ಗುರುಮಠಕಲ್, ಕಲಬುರಗಿ, ಸೇಡಂ, ರಾಯಚೂರು, ವಿಜಯಪೂರ, ಹುಬ್ಬಳ್ಳಿ, ದಾವಣಗೆರೆ, ಧಾರವಾಡದ ವರೆಗೆ ಬಸ್ ಸಂಚಾರ ಆರಂಭಿಸಲಾಗಿದೆ.
ಸುರಪುರ ಘಟಕದಿಂದ ಕಲಬುರಗಿ, ಯಾದಗಿರಿ, ಕೆಂಭಾವಿ, ವಿಜಯಪೂರ, ಹುಣಸಗಿ-ನಾರಾಯಣಪೂರ, ಲಿಂಗಸುಗೂರ ವರೆಗೆ ಬಸ್ ಸಂಚಾರ ಆರಂಭಿಸಲಾಗಿದೆ.
ಶಹಾಪುರ ಘಟಕದಿಂದ ಕಲಬುರಗಿ, ರಾಯಚೂರು, ವಿಜಯಪೂರ, ಯಾದಗಿರಿ, ಕೆಂಭಾವಿ, ಹುಣಸಗಿ, ಬಳ್ಳಾರಿ, ಇಲಕಲ್, ಬೀದರ್, ದೇವದುರ್ಗ, ಹುಬ್ಬಳ್ಳಿ ವರೆಗೆ ಬಸ್ ಸಂಚಾರ ಆರಂಭಿಸಲಾಗಿದೆ.
ಗುರುಮಠಕಲ್ ಘಟಕದಿಂದ ಕಲಬುರಗಿ, ಯಾದಗಿರಿ, ಸೇಡಂ, ಬೆಳಗಾವಿ, ಹುಣಸಗಿ, ಬೀದರ್ ವರೆಗೆ ಬಸ್ ಸಂಚಾರ ಆರಂಭಿಸಲಾಗಿದೆ.
ಮೇಲಿನ ಸಾರಿಗೆ ಬಸ್‌ಗಳು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ಅಥವಾ ನಿಗದಿತ ಸ್ಥಳ ತಲುಪುವವರೆಗೆ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಒಂದು ಬಸ್‌ನಲ್ಲಿ ಗರಿಷ್ಠ ೩೦ ಜನ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಪ್ರಯಾಣಿಕರು ಬಸ್‌ಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್ ಹಾಗೂ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.
ಬಸ್‌ಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನಿರ್ವಾಹಕರು ಕೇಳುವ ಪ್ರಯಾಣದ ವಿವರವನ್ನು ನೀಡಿ ಸಹಕರಿಸಬೇಕು. ಪ್ರಸ್ತುತ ಅಂತರರಾಜ್ಯ ಮಾರ್ಗಗಳಲ್ಲಿ ಯಾವುದೇ ಸಾರಿಗೆಗಳ ಕಾರ್ಯಾಚರಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿಗೆ ಬಸ್‌ಗಳ ಕಾರ್ಯಾಚರಣೆ: ಜಿಲ್ಲೆಯ ಯಾದಗಿರಿ, ಶಹಾಪೂರ ಹಾಗೂ ಸುರಪುರದಿಂದ ಬೆಂಗಳೂರಿಗೆ ಸಂಚಾರ ದಟ್ಟಣೆ ಮೇರೆಗೆ ಮೇ ೨೦ರಿಂದ ಬೆಳಿಗ್ಗೆ ೭ ಗಂಟೆಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಸದರಿ ಸಾರಿಗೆ ಸೇವೆಯನ್ನು ಸದಪಯೋಗ ಪಡಿಸಿಕೊಳ್ಳುವಂತೆ ಹಾಗೂ ಸಂಸ್ಥೆಯೊAದಿಗೆ ಸಹಕರಿಸುವಂತೆ ಸಾರ್ವಜನಿಕ ಪ್ರಯಾಣಿಕರಲ್ಲಿ ಅವರು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss