ಯಾದಗಿರಿ: ಹುಣಸಗಿ ತಾಲೂಕಿನ ನಾರಾಯಣಪೂರ ಬಸವಸಾಗದ ಜಲಾಶಯದಿಂದ ಸುಮಾರು 1.80 ಲಕ್ಷ ನೀರು ಕೃಷ್ಣಾ ನದಿಗೆ ಬಿಸುವುದರಿಂದ ನದಿ ಪಾತ್ರದ ಜನತೆಯಲ್ಲಿ ಪ್ರವಾಹದ ಭೀತಿ ಹುಟ್ಟಿದೆ.
ಕಳರದ ಒಂದು ವಾರದಿಂದ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಎರೆಡು ನದಿಗಳಾದ ಭೀಮಾ ಮತ್ತು ಕೃಷ್ಣಾ ಈಗಾಗಲೇ ತುಂಬಿ ಹರಿಯುತ್ತಿವೆ. ಭಾನುವಾರ ಮಧ್ಯಾಹ್ನದ ಸುನಾರಿಗೆ ಬಸವಸಾಗರದಿಂದ 1.80 ಲಕ್ಷ ಕ್ಯೂಸೆಕ ನೀರು ನದಿಗೆ ಬಿಡಲಾಗುತ್ತದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಆಲಿಮಟ್ಟಿಯಲ್ಲಿ ಒಳಹರಿವು ಹೆಚ್ಚಾಗಿದ್ದಾರಿಂದ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಬಸವಸಾಗರದಿಂದ ಕೃಷ್ಣಾನದಿಗೆ ಭಾನುವಾರ ಮಧ್ಯಾಹ್ನದ 3 ಗಂಎಯ ಸುಮಾರಿಗೆ 1.80 ಲಕ್ಷ ನೀರು ಹರಿಬಿಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖ ಕಂಡು ಬಂದಿತ್ತು. ಆದರೆ ಮತ್ತೇ ಇವತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದರಿಂದ ಅನ್ನದಾತರು ತೀವ್ರ ಸಂಕಷ್ಟಕ್ಕೆಕ ಒಳಗಾಗಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಿಂದಾಗಿ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಕೊಳೆತು ಹೋಗುತ್ತಿವೆ. ಅಲ್ಲದೆ ಹೆಸರು ಹೂ ಕಯಿ ಬಿಡುವ ಸಂದರ್ಭದಲ್ಲಿ ಈ ಮಳೆಯಿಂದ ಅಪಾರ ಹಾನಿಯಾಗುತ್ತಿದೆ. ಅದಕ್ಕಾಗಿ ಜಿಲ್ಲಾಡಳಿತ ಹಾನಿಯಾದ ಬೆಳೆಗಳ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. .