ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬುಧವಾರ ೭೫೬೦೦ ಕ್ಯೂಸೆಕ ನೀರು ಹರಿಬಿಡಲಾಗಿದೆ.
ಆಲಾಸಯಕ್ಕೆ ೬೫ಮ ಸಾವಿರ ಕ್ಯೂಸೆಕ ನೀರು ಒಳ ಹರಿವು ಇರುವುದರಿಂದ ಜಲಾಶಯ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ೭೫೬೦೦ ಕ್ಯೂಸೆಕ ನೀರು ಹರಿಬಿಡಲಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗಷ್ಠೆ ಪ್ರವಾಹದಿಂದ ನಿರಾಳಗೊಂಡ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮತ್ತೇ ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವುದು ಅತಂಕಕ್ಕೆ ಮನೆ ಮಾಡಿದೆ. ಜಿಲ್ಲೆಯಲ್ಲಿ ಪ್ರವಾಹ ನತ್ತು ಸತತ ಮಳೆಯಿಂದ ಬಿತ್ತನೆ ಮಾಡಿದ ಬೆಳೆಗಳು ನಾಶವಾಗಿದ್ದು ಸರಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಗೂಗಲ್ ವ್ಯಾರೇಜ : ವಡಗೇರಾ ತಾಲೂಕಿನ ಗೂಗಲ ಹತ್ತಿರ ನಿರ್ಮಿಸಲಾದ ಬ್ಯಾರೇಜಿಗೆ ಒಳ ಹರಿವು ೫೩ ಸಾವಿರ ಇದ್ದು ಅಷ್ಠೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.