Tuesday, August 16, 2022

Latest Posts

ಯಾದಗಿರಿ | ಬಾಯ್ಲರ್ ಸ್ಪೋಟ ಮೃತರ ಕುಟುಂಬಕ್ಕೆ ರೂ.3ಲಕ್ಷ ಮಂಜೂರು

ಯಾದಗಿರಿ : ಗುರುಮಠಕಲ್ ತಲೂಕಿನ ಕಡೇಚೂರು-ಬಾಡಿಯಾಳ ಕೈಗಾರಿಕ ಪ್ರದೇಶದ ಎಸ್.ಬಿ ಪೈರಾಲೀಸಿಸ್ ಇಂಡಸ್ಟ್ರೀಸ್ನ ಬಾಯ್ಲರ್ ಸ್ಪೋಟದಲ್ಲಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ರೂ. 3ಲಕ್ಷ ಪರಿಹಾರವನ್ನು ಸರಕಾರ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಪರಿಹಾರದ ವಿಚಾರವಾಗಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಬಾಯ್ಲರ್ ಸ್ಪೋಟದ ಘಟನೆಯ ವಿವರವನ್ನು ವಿಧಾನ ಸಭಾ ಕಲಾಪದಲ್ಲಿ ಪ್ರಸ್ಥಾಪ ಮಾಡಿ, ಸರಕಾರವನ್ನು ಒತ್ತಾಯಿಸಿದ್ದರು. ಅದರ ಫಲಶೃತಿಯಾಗಿ ಈಗ ಸರಕಾರ ಹುಸೇನ್ ಮತ್ತು ಆರೀಫ್ ಕುಟುಂಬಕ್ಕೆ ತಲಾ 3 ಲಕ್ಷರೂ.ಗಳನ್ನು ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಸರಕಾರ ನೀಡುತ್ತಿದೆ.
ಕಳೆದ ಮಾರ್ಚ-10ರಂದು ಎಸ್.ಬಿ ಪೈರಾಲೀಸಿಸ್ ಇಂಡಸ್ಟ್ರೀಸ್ನ ಹಳೆಯ ಟೈರಗಳಿಂದ ಎಣ್ಣೆ ತೆಗೆಯುವ ರಿಯಾಕ್ಟರ್ನ ಬಾಗಿಲು ಜಾಮ್ ಆಗಿತ್ತು, ಅದನ್ನು ಕಟ್ಟರ್ ಉಪಯೋಗಿಸಿ ತೆಗೆಯುತ್ತಿದ್ದ ವೇಳೆ ಬಾಯ್ಲರ್ ಸ್ಪೋಟಗೊಂಡು ಎಂಟು ಜನ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಳು ಕಾರ್ಮಿಕರನ್ನು ಪಕ್ಕದ ರಾಯಚೂರಿನ ರಿಮ್ಸ್ ಆಸ್ಪತ್ರೆ, ಹೈದರಾಬಾದ್ನ ಯಶೋಧ ಹಾಗೂ ಗುಡ್ಲೈಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡ ಎಂಟು ಜನರಲ್ಲಿ ಹುಸೇನ್ ಮತ್ತು ಆರೀಫ್ ಇಬ್ಬರು ವ್ಯಕ್ತಿಗಳು ಮೃತ ಪಟ್ಟಿದ್ದರು. ಮೃತರ ಕುಟುಂಬಗಳಿಗೆ ಮಾನವೀಯತೆಯ ಆಧಾರದ ಮೇಲೆ ಕರ್ನಾಟಕ ಕಾರ್ಮಿಕರ ಕಲ್ಯಾಣ ವತಿಯಿಂದ ತಲಾ ರೂ.3ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಗಾಯಾಳುಗಳಿಗೆ ವೈದ್ಯಕೀಯ ವೆಚ್ಚ :
ಕಡೇಚೂರು-ಬಾಡಿಯಾಳ ಕೈಗಾರಿಕ ಪ್ರದೇಶದ ಎಸ್.ಬಿ ಪೈರಾಲೀಸಿಸ್ ಇಂಡಸ್ಟ್ರೀಸ್ನ ಬಾಯ್ಲರ್ ಸ್ಪೋಟದಲ್ಲಿ ಗಾಯಗೊಂಡಿರುವ ಗಾಯಾಳುಗಳ ವೈದ್ಯಕೀಯ ವೆಚ್ಚದ ಶೇ.50ರಷ್ಟು ಕಾರಖಾನೆಯ ಆಡಳಿತ ವರ್ಗ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯಿಂದ ಮರುಪಾವತಿ ಮಾಡಲಾಗುವುದು. ಒಂದು ವೇಳೆ ಕಾರ್ಖಾನೆಯ ಆಡಳಿತ ವರ್ಗ ವೈದ್ಯಕೀಯ ವೆಚ್ಚ ಭರಿಸದಿದ್ದಲ್ಲಿ ಶೇ.100ರಷ್ಟು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯೇ ಭರಿಸುವುದು ಹಾಗೂ ಮಾಲಿಕರ ವಿರುದ್ಧ ಕಾನೂನು ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಾಯ್ಲರ್ ಸ್ಪೋಟದಲ್ಲಿ ಮೃತ ಹಾಗೂ ಗಾಯಾಳುಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವಿಧಾನ ಸಭಾ ಅಧಿವೇಶನದಲ್ಲಿ ಒತ್ತಾಯಿಸಲಾಗಿತ್ತು. ಇದೀಗ ಸರಕಾರ ಮೃತರಿಗೆ ರೂ.3ಲಕ್ಷ ಹಾಗೂ ಗಾಯಾಳುಗಳಿಗೆ ವೈದ್ಯಕೀಯ ವೆಚ್ಚ ನೀಡುವುದಾಗಿ ತಿಳಿಸಿದೆ. ವಯಕ್ತಿಕವಾಗಿಯೂ ಅವರ ಕುಟುಂಬಕ್ಕೆ ನಮ್ಮಿಂದ ಸಹಾಯ ನೀಡಲಾಗಿದೆ.
• ನಾಗನಗೌಡ ಕಂದಕೂರ ಶಾಸಕರು ಗುರುಮಠಕಲ್ ಕ್ಷೇತ್ರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss