ಯಾದಗಿರಿ: ದೇಶದಲ್ಲಿ ಕೊರೋನಾ ವೈರಸ್ ದಾಳಿಯಿಂದ ಇಡಿ ಮನುಕುಲ ಸಂಕಷ್ಟದಲ್ಲಿದೆ. ಮುಸ್ಲಿಂ ಭಾಂದವರಿಗೆ ರಂಜಾನ ಹಬ್ಬ ಪವಿತ್ರವಾಗಿದೆ. ಆದರೆ ಲಾಕ್ ಡೌನ್ನಿಂದ ಜನರು ಕೆಲಸವಿಲ್ಲದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಕೂಡ ಇತರರಂತೆ ಸಂತೋಷದಿoದ ರಂಜಾನ ಹಬ್ಬ ಆಚರಿಸಲು ತಂಜಿಮುಲ್ ಮುಸ್ಲಿಂಮೀನ್ ಮತ್ತು ಬೈತುಲ್ ಮಾಲ ವತಿಯಿಂದ ಆಹಾರ ಕಿಟ್ಗಳನ್ನು ನೀಡಲಾಗುತ್ತಿದೆ ಎಂದು ಅಧ್ಯಕ್ಷ ಲಾಯಕ ಹುಸೇನ್ ಬಾದಲ್ ಹೇಳಿದರು.
ಶುಕ್ರವಾರ ನಗರದ ಬೈತುಲ್ ಮಾಲನಲ್ಲಿ ಹಮ್ಮಿಕೊಂಡಿದ ಕಾರ್ಯಕ್ರಮದಲ್ಲಿ ೨೫೦೦ ಬಡ ಕುಟುಂಬಗಳಿಗೆ ಆಹಾರ ಕೀಟ್ ವಿತರಿಸಿ ಮಾತನಾಡಿದ ಅವರು ನಾವು ಮೊದಲಿನಿಂದ ಎಲ್ಲಾ ವರ್ಗದ ಜನರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿ ಸಾಮರಸ್ಯ ಕಾಪಾಡಿಕೊಂಡು ಬಂದಿದ್ದೇವೆ. ಅವರು ಕೂಡ ಕಷ್ಟದ ಸಮಯದಲ್ಲಿ ಸಮಾಜದ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ ಎಂದು ತಿಳಿಸಿ, ನಮ್ಮ ಮುಖಂಡರು ಅವರವರ ವೃತ್ತಿಯಲ್ಲಿ ಸಂಪಾದಿಸಿದ ಹಣದಲ್ಲಿ ಸ್ವಲ್ಪ ಹಣ ಸಮಾಜ ಮುಖಿ ಕಾರ್ಯಗಳಿಗೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇತರ ವರ್ಗಗಳ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.
ಸಮಾರಂಭದಲ್ಲಿ ಉಪಾಧ್ಯಕ್ಷರಾದ ವಾಹೀದ್ ಮೀಯಾ, ಗುಲಾಮ ಸಂದಾನಿ ಮುಸಾ, ನಿಯಾಜ ಅಹ್ಮದ ಖೋತ, ಖಾಜಿ ಹಸನ ಸಿಧ್ಧಿಖಿ, ಅಬ್ದುಲ್ ಸಲೀಮ್ ಸಾಬ ಗೋಗಿ, ಶೇಖ ಜಹಿರೋದ್ದೀನ್ ಸಾವೇರಾ, ಗುಲಾಮ ಜೀಲಾನಿ ಆಫಖಾನಿ, ಇನಾಯತ್ ಉರ್ ರಹೆಮಾನ್, ಫಯಾಜ ಅಹ್ಮದ ಶಹಾನಾ, ಡಾ. ರಫೀಕ್ ಸೌದಾಗಾರ್, ಡಾ.ಶಫಿ ಸಾಬ ತುನ್ನುರ್, ಅಬ್ದೂಲ್ ಸಾಬ ಕಲ್ಲೂರ್, ಅನ್ಸಾರುದ್ದೀನ್, ಹಮೀದ್ ಸಾಬ, ಸಲೀಮ್ ಸಾಬ ಸಗರಿ, ಶಂಶುಜಾಮ ಹಾಜಿ ಆಯಿಲ್ ಮಿಲ್, ಅನ್ವರ ಪಟೇಲ್ ಮತ್ತು ಇತರರು ಇದ್ದರು.