Wednesday, July 6, 2022

Latest Posts

ಯಾದಗಿರಿ: ಮತದಾನ ಮೊದಲ ಹಂತದ ಗ್ರಾ.ಪಂ. ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ

ಹೊಸದಿಗಂತ ವರದಿ,ಯಾದಗಿರಿ: 

ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಎರಡು ಹಂತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೊದಲನೇ ಹಂತದ ಚುನಾವಣೆಗೆ ಮೊದಲನೇ ಹಂತದಲ್ಲಿ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ ಇದೇ ಡಿ.22ರಂದು ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.

ಈಗ ಏನಿದ್ದರೂ ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ಮಾಡಿ ಮತದಾರರನ್ನು ತಮ್ಮತ್ತ ಸೆಲೆದುಕೊಳ್ಳಲು ಕಸರತ್ತು ನಡೆಸಿದ್ದಾರೆ. ಪ್ರತಿ ವಾರ್ಡಿನಲ್ಲೂ ಕಡಿಮೆ ಮತದಾರರು ಇರುವುದರಿಂದ ಪ್ರತಿಯೊಂದು ಮತವು ಅತೀ ಪ್ರಮುಖ್ಯತೆ ಪಡೆದಿದೆ. ಒಂದೆರಡು ಮತಗಳು ಅಭ್ಯರ್ಥಿಯ ಗೆಲವಿಗೆ ಮುಖ್ಯವಾಗಿದೆ ಭವಿಷ್ಯವನ್ನೆ ನಿರ್ಮಿಸಲಿದೆ. ಕೆಲವು ಸ್ಥಾನಗಳಲ್ಲಿ ನೇರ ಸ್ಫರ್ದೆ ಇದ್ದರೆ ಇನ್ನೂ ಕೆಲವಡೆ ಇಬ್ಬರಿಗಿಮತೆ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಇದು ಮತದಾರರಿಗೆ ಬಿಸಿ ತುಪ್ಪವಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಪಕ್ಷಾತೀತವಾಗಿ ನಡೆಯಬೇಕಿದ್ದ ಈ ಚುನಾವನೆಗಳು ಪಕ್ಷದ ಮುಖಂಡರ ನೇತೃತ್ವದಲ್ಲಿಯೇ ನಡೆಯುತ್ತಲಿವೆ. ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲವಿಗಾಗಿ ತೆರೆಮರೆಯಲ್ಲಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿವೆ. ಏಕೆಂದರೆ ಈ ಗೆಲವಿನ ಮೇಲೆ ಅಲ್ಲಿನ ಮುಖಂಡರ ವರ್ಷಸ್ಸು ನಿರ್ಧಾರವಾಗುತ್ತದೆ. ಮುಂದಿನ ದಿನಗಳಲ್ಲಿ ತಾಪಂ ಮತ್ತು ಜಿಂಪ ಚುನಾವಣೆಗೆ ಸ್ಥಾನಗಳನ್ನು ಕೇಳಲು ಅರ್ಹತೆ ಪಡೆದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಲಿವೆ.

ಯರಗೋಳ ಗ್ರಾಮ ಪಂಚಯತ್ ಚುನಾವಣಾ ಕಣದಲ್ಲಿ ಈ ಸಲ ಹೆಚ್ಚಿನ ಅರ್ಭಯರ್ಥಿಗಳು ಪದವಿದದರೆ ಸ್ಪರ್ಧಿಸಿದ್ದಾರೆ. ಕೆಲವರು ಬಿಎ ಪದವಿದಾರರು ಆಗಿದ್ದರೆ ಇನ್ನೂ ಕೆಲವರು ಡಿಪ್ಲೋಮಾ ಮತ್ತು ಇತರ ಪದವಿಯನ್ನು ಹೊಂದಿದವರಾಗಿದ್ದಾರೆ. ಹೀಗಾಗಿ ಇಲ್ಲನ ಚುಆವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತ ಸಜ್ಜು : ಮೊದಲ ಹಂತದ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಅಲ್ಲದೆ ಸೂಕ್ಷö್ಮ ಮತ್ತು ಅತೀ ಸೂಕ್ಷö್ಮ ಪ್ರದೇಶದಲ್ಲಿ ಅಹಿತಕರ ಘಟನೆ ಜರಗÀದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ: ಮತದಾನ ದಿನದಂದು ಗ್ರಾಮ ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಮತದಾರರು ಮತದಾನ ಮಾಡುವಾಗ ಕೇಂದ್ರ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ  22 ದಾಖಲೆಗಳ ಪೈಕಿ ಯಾವುದಾದರು ಒಂದನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss