ಯಾದಗಿರಿ : ಜಿಲ್ಲೆಯಲ್ಲಿ ಮತ್ತೇ ೫ ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಒಟ್ಟು ೧೦ ಕ್ಕೆ ಏರಿಕೆಯಾಗಿದೆ.
ಇವತ್ತು ಮಧ್ಯಾಹ್ನ ಆರೋಗ್ಯ ಇಲಾಖೆ ಬಿಡುಗಡೆ ಬುಲೆಟಿನಲ್ಲಿ ಮಹಾರಾಷ್ಟçದಿಂದ ಬಂದ ೫ ಜನರಿಗೆ ಸೋಂಕು ದೃಡಪಟ್ಟಿದ್ದು ಅವರೆಲ್ಲರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಂಕಿತರಲ್ಲಿ ಒಬ್ಬಳು ಪಿ-೧೧೮೮ ಮಹಿಳೆ(೨೫) ಮತ್ತು ೧೫ ವರ್ಷದ ಒಬ್ಬ ಪಿ-೧೧೯೦ ಬಾಲಕ ಸೇರಿ ಪಿ-೧೧೮೯ (೩೦), ಪಿ-೧೧೯೧ (೨೫) ಮತ್ತು ಪಿ-೧೧೯೨ (೩೦) ವರ್ಚದ ಪುರಷರಿದ್ದಾರೆ.. ಇವರೆಲ್ಲರೂ ಮಹಾರಾಷ್ಟçದಿಂದ ಸ್ವಗ್ರಾಮಕ್ಕೆ ವಾಪಸ್ಸು ಬಂದ ಕೀಲಿ ಕಾರ್ಮಿಕರಾಗಿದ್ದಾರೆ. ಇವರೆಲ್ಲ ಒಂದೇ ತಾಂಡದ ನಿವಾಶಿಗಳೆಂದು ಸಹ ತಿಳಿದು ಬಂದಿದೆ.
ಕಳೆದ ಮೂರು ನಾಲಕು ದಿನಗಳಲ್ಲಿ ಸಾವಿರಾರು ವಲಸಿಗ ಕಾರ್ಮಿಕರು ನಗರಕ್ಕೆ ಆಗಮಿಸಿದ್ದು ಅವರೆಲ್ಲರನ್ನೂ ಕ್ವಾರೆಂಠೈನ ಮಾಡಲಾಗಿದೆ. ಬಹುತೇಕರಲ್ಲಿ ಸೋಂಕು ಇರುವುದು ತಿಳಿದು ಬಂದಿದ್ದು ಇದು ಬರುವ ದಿನಗಳಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಜಿಲ್ಲೆಯ ಜನರ ನಿದ್ದೆ ಕೆಡಿಸಿದೆ.