Wednesday, August 17, 2022

Latest Posts

ಯಾದಗಿರಿ| ಮತ್ತೊಂದು ಪ್ರಕರಣ ದೃಢ: ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ

ಯಾದಗಿರಿ: ಜಿಲ್ಲೆಯಲ್ಲಿ 55 ವರ್ಷದ ಮಹಿಳೆೆಯಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು 13 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಂಪಾಡ ತಾಂಡಾದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಈಕೆಯೂ ಸಹ ಮೇ 14 ರಂದು ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕರಲ್ಲಿ ಒಬ್ಬಳಾಗಿದ್ದಾಳೆ. ಈಕೆಯನ್ನು ಸಹ ಕ್ವಾರಂಟೈನನಲ್ಲಿ ನಿಗಾ ವಹಿಸಲಾಗಿತ್ತು. ಆಕೆಯಲ್ಲಿ ಸೋಂಕು ಇರುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಕೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಲ್ಲೆಯ ಗರ್ಭಿಣಿ ಮಹಿಳೆಯಲ್ಲಿ ಸೋಂಕು ಕಂಡು ಬಂದಿದ್ದು ಆಕೆಗೆ ಕಲಬರುಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 12 ಜನರಿಗೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊದಲ ಎರಡು ಪ್ರಕರಣಗಳು ಗುಜರಾತಿನಿಂದ ಬಂದವರಲ್ಲಿ ಕಂಡು ಬಂದಿದ್ದು, ಇನ್ನುಳಿದವರೆಲ್ಲ ಮಹಾರಾಷ್ಟçದಿಂದ ಬಂದ ಕೂಲಿ ಕಾರ್ಮಿಕರೆ ಇದ್ದಾರೆ. ಇನ್ನೂ ಬಹಳಷ್ಟು ಪ್ರಕರಣಗಳ ಫಲಿತಾಂಶ ಬರಬೇಕಿದೆ. ದಿನದಿಂದ ದಿನಕ್ಕೆ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಲಾಕ್‌ಡೌನ ಸಡಲಿಕೆಯಿಂದ ಜನರು ಬೇಕಾಬರಟ್ಟಿ ತಿರಗಾಡುತ್ತಿದ್ದಾರೆ. ಸಮಾಜಿಕ ಅಂತರ ಕಾಪಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರು ಟ್ರಾಕ್ಟರ್ ಗಳಲ್ಲಿ ಓಡಾಟ ಮಾಡುತ್ತಿದ್ದು, ಸರಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಇರುವುದು ಕಂಡು ಬರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!