ಯಾದಗಿರಿ: ಶುಕ್ರವಾರದಂದು ಪ್ರಕಟಗೊಂಡ ಆರೋಗ್ಯ ಇಲಾಖೆಯ ಬುಲೆಟ್ ಇನ್ನಲ್ಲಿ ಜಿಲ್ಲೆಯ 60 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ. ಇವರೆಲ್ಲ ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕರಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರಾರಂಭದ 45 ದಿನ ಯಾವುದೇ ಸೋಂಕು ಇಲ್ಲದೆ ಜನರು ನಿರಾಳ ಬದಕು ಸಾಗಿಸುತ್ತಿದ್ದರು. ಆದರೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುತ್ತಿದ್ದ ವಲಸೆ ಕಾರ್ಮಿಕರಿಂದ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಇಳಿಮುಖ ಕಾಣದೆ ಇವತ್ತು ಜಿಲ್ಲೆ ದ್ವಿಶತಕದತ್ತ ಸಾಗಿದೆ.
ಜಿಲ್ಲೆಯ ತಾಂಡಾಗಳು ನಿವಾಸಿಗಳಲ್ಲಿ ಈ ಸೋಂಕು ಕಂಡುಬಂದಿದ್ದು, ಗ್ರಾಮೀಣ ಭಾಗದಲ್ಲಿ ಜನರು ಬೆಚ್ಚಿ ಬೀಳುವಂತಾಗಿದೆ. ಸೋಂಕಿತ ಪ್ರದೇಶದಿಂದ ಬಂದ ಕಾರ್ಮಿಕರನ್ನು ಜಿಲ್ಲಾಡಳಿತ ಸೂಕ್ತ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸದೆ ಕ್ವಾರಂಟೈನ್ ಕೇಂದ್ರಗಳಲ್ಲಿ ಹಿಂಡು ಹಿಂಡು ಆಗಿ ಇರಿಸಿದ್ದು ಸೋಂಕು ಹೆಚ್ಚಲು ಕಾರಣ ಎಂದು ಹೇಳಲಾಗುತ್ತಿದೆ.
ಅಲ್ಲದೆ ಮಾದರಿ ಪರೀಕ್ಷೆಗಳು ಸಕಾಲದಲ್ಲಿ ಬರುತ್ತಿಲ್ಲ. ಗುರುವಾರದವರಿಗೆ ಸುಮಾರು 8 ಸಾವಿರಕ್ಕೂ ಹೆಚ್ಚು ಮಾದರಿಗಳ ಫಲಿತಾಂಶ ಬರಬೇಕಿದೆ. ಇದರಿಂದ ಬರುವ ದಿನಗನಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಈ ಪ್ರಮಾಣದ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಲಿವೆ.