ಯಾದಗಿರಿ: ಕೋವಿಡ್-19 ಸಂಬಂಧ ಜಿಲ್ಲೆಯಲ್ಲಿ ಜುಲೈ 15 ರಿಂದ ರಾತ್ರಿ 8 ಗಂಟೆಯಿಂದ 22 ರ ವರೆಗೆ ರಾತ್ರಿ 8 ಗಂಟೆಯವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಜುಲೈ 17ರಂದು ಲಾಕ್ ಡೌನ್ ಉಲ್ಲಂಘನೆ ಮಾಡಿರುವ ಪ್ರಕರಣಗಳಲ್ಲಿ ಒಟ್ಟು 1,28,900 ರೂ. ದಂಡ ವಿಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ 72,800 ರೂ. ದಂಡ ವಿಧಿಸಲಾಗಿರುತ್ತದೆ. ಅದೇ ತರಹ ಜಿಲ್ಲಾ ಪೊಲೀಸ್ ವತಿಯಿಂದ ಮಾಸ್ಕ್ ಧರಿಸದ 236 ಸಾರ್ವಜನಿಕರಿಗೆ 26,900 ರೂ.ಗಳ ದಂಡ ವಿಧಿಸಲಾಗಿರುತ್ತದೆ. ಸಾಮಾಜಿಕ ಅಂತರ ಕಾಪಾಡದ 16 ಸಾರ್ವಜನಿಕರಿಗೆ 3,200 ರೂ. ದಂಡ ವಿಧಿಸಲಾಗಿರುತ್ತದೆ. ತಂಬಾಕು, ಗುಟ್ಕಾ, ಪಾನ್ ಹಾಗೂ ಮದ್ಯ ಸೇವನೆ ಮಾಡಿದ್ದ 68 ಜನರಿಗೆ 10,100 ರೂ. ದಂಡ ವಿಧಿಸಲಾಗಿರುತ್ತದೆ. ಇನ್ನು ಐ.ಎಂ.ವಿ ಕಾಯ್ದೆ ಅಡಿಯಲ್ಲಿ 39 ಪ್ರಕರಣಗಳನ್ನು ದಾಖಲಿಸಿ 15,900 ದಂಡ ವಿಧಿಸಲಾಗಿದೆ.
ಲಾಕ್ ಡೌನ್ಅವಧಿಯಲ್ಲಿ ತುರ್ತು ಕೆಲಸಕ್ಕೆ ಹೊರತುಪಡಿಸಿ ಬೇರೆ ಕೆಲಸಕ್ಕೆ ಹೊರಬಂದಲ್ಲಿ ಅಂಥವರ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸಲಾಗುವುದು. ಪ್ರಯುಕ್ತ, ಸಾರ್ವಜನಿಕರು ಲಾಕ್ ಡೌನ್ ಅವಧಿಯಲ್ಲಿ ಗೃಹ ದಿಗ್ಬಂಧನದಲ್ಲಿರಲು ಅವರು ಸೂಚಿಸಿದ್ದಾರೆ.