Thursday, August 11, 2022

Latest Posts

ಯಾದಗಿರಿ| ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಯಾದಗಿರಿ : ಲಾಕ್‌ಡೌನ್ ಕಾಲಾವಧಿ ಪೂರ್ಣವೇತನಕ್ಕಾಗಿ ಕೆಲಸ ನಿರಾಕರಣೆ ತಡೆಗಾಗಿ ಕೆಲಸದ ಅವಧಿ ಹೆಚ್ಚಳ ವಾಪಸ್ಸಿಗೆ ಆಗ್ರಹಿಸಿ ಭಾರತೀಯ ಕಮ್ಯೂನಿಷ್ಠ ಪಕ್ಷದ ಜಿಲ್ಲಾ ಸಂಘಟನೆ ವತಿಯಿಂದ ಯಾದಗಿರಿ ತಹಸೀಲ್ದಾರ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ದಾವಲ್‌ಸಾಬ್ ನದಾಫ್ ಮಾತನಾಡಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೆ 6 ತಿಂಗಳು ರೂ.7500ನೇರ ನಗದು ವರ್ಗಾವಣೆ ಮಾಡಬೇಕು, ಎಲ್ಲರಿಗೂ ಮುಂದಿನ 6 ತಿಂಗಳು ಮಾಸಿಕ ತಲಾ 10 ಕೆ.ಜಿ. ಆಹಾರ ಧಾನ್ಯ ವಿತರಿಸಬೇಕೆಂದು ಒತ್ತಾಯಿಸಿದರು.
200 ದಿನಗಳಿಗೆ ಉದ್ಯೋಗ ಖಾತ್ರಿ ಕೆಲಸದ ಅವಧಿ ಹೆಚ್ಚಳ ಪ್ರತಿ ದಿನ 600 ರೂಪಾಯಿ ಕೂಲಿ ನೀಡಬೇಕು, ವಲಸೆ ಬಂದ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿದರು. ಸಾರ್ವಜನಿಕ ಉದ್ದಿಮೆಗಳ ಮಾರಾಟ, ಕಾರ್ಮಿಕ ಕಾನೂನುಗಳ ಅಮಾನತು ತಡೆಗಾಗಿ ಕೆಲಸ ಕಳೆದುಕೊಂಡವರಿಗೆ ನಿರುದ್ಯೋಗ ಭತ್ಯೆಗಾಗಿ ಅಗತ್ಯ ಕೋವಿಡ್ ಪರಿಕ್ಷೆ ಕಿಟ್‌ಗಳ ಸೌಲಭ್ಯ ಜೊತೆಗೆ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಗೊಳಸಬೇಕು, ವಿದ್ಯುತ್ ಖಾಸಗಿಕರಣ ನಿಲ್ಲಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂರ್ದದಲ್ಲಿ ಬಾಬುರಾವ್, ಕಾಳಪ್ಪ ಬಡಿಗೇರ್, ಸಾಲರಸಾಬ್, ಮಾಳಪ್ಪ ಪೂಜಾರಿ ದುಪ್ಪಲ್ಲಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss