Wednesday, August 10, 2022

Latest Posts

ಯಾದಗಿರಿ- ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಶಿಥಿಲಗೊಂಡ ರೈಲ್ವೆ ಸೇತುವೆಯನ್ನು ಪರಿಶೀಲಿಸಿದ ಸಚಿವ ಅಶೋಕ್

ಯಾದಗಿರಿ: ಯಾದಗಿರಿ ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಶಿಥಿಲಗೊಂಡ ರೈಲ್ವೆ ಸೇತುವೆಯನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ವೀಕ್ಷಣೆ ಮಾಡಿದರು.
ನಗರದ ಹಳೆ ಬಸ ನಿಲ್ದಾಣದ ಹತ್ತಿರ ಇರುವ ರೈಲ್ವೆ ಮೇಲು ಸೇತುವೆ ಇತ್ತೀಚಿಗೆ ಜಿಲ್ಲೆಯಲ್ಲಿ ಬಿದ್ದ ಮಳೆಯಿಂದ ಕುಸಿದು ಹೋಗಿ ಕಳೆದ 15 ದಿನಗಳಿಂದ ಸಂಚಾರ ಸ್ಥಗಿತಗೊಂಡಿದೆ. ಈಗ ಪರ್ಯಾಯ ಮಾರ್ಗದಲ್ಲಿ ವಹನಗಳ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ.
ಬುಧವಾರ ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸೇತುವೆಯನ್ನು ವೀಕ್ಷಿಸಿ ಸಂಬoಧಿತ ಅಧಿಕಾರಿಗಳಿಂದ ಮಾಹಿತಿಯನ್ನು ಕಲೆಹಾಕಿದರು. ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಮಣ್ಣು ಮತ್ತೇ ಕುಸಿಯುತ್ತಿರುವುದರಿಂದ ಕೆಲಸ ಮಾಡಲಾಗುತ್ತಿಲ್ಲ. ಕೆಳ ಹಂತದಿAದ ಕಲ್ಲಿನ ಗೋಡೆ ನಿರ್ಮಿಸಬೇಕಾಗಿದೆ. ಅದಕ್ಕಾಗಿ ಸೇತುವೆ ದುರಸ್ತಿಗಾಗಿ ಸುಮಾರು 7 ಕೋಟಿ 35 ಲಕ್ಷ ರೂಪಾಯಿಯ ವೆಚ್ಚವಾಗಲಿದ್ದು, ಹೊಸದಾಗಿ ಕ್ರಿಯಾ ಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಿಡಬ್ಲೂಡಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರೆನ್ನಲಾಗಿದೆ.
ಈ ಕುರಿತು ನಾನು ಸಹ ಸಂಬoಧಿತ ಇಲಾಖೆಯ ಸಚಿವರ ಜೊತೆ ಮಾತನಾಡಿ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಆದಾಗ್ಯೂ ಕಾಮಗಾರಿಯ ಕುರಿತು ಯಾವುದೇ ನಿರ್ಲಕ್ಷಧೋರಣೆ ಮಾಡಬಾರದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಾಸಕ ರಾಜುಗೌಡ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss