ಯಾದಗಿರಿ: ರಾಜ್ಯ ಸರ್ಕಾರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಲವಾರು ಯೋಜನೆಗಳು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಅದರ ಲಾಭ ಪಡೆದು ಶೈಕ್ಷಣಿಕವಾಗಿ ತಮ್ಮ ಗುರಿ ತಲುಪಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ಮಂಗಳವಾರ ನಗರದ ಹೊಸ ಪ್ರವಾಸಿ ಮಂದಿರ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿAದ ಮಂಜೂರಾದ 8 ಕೋಟಿ ರೂ. ವೆಚ್ಚದ ಸರ್ಕಾರಿ ಪದವಿ ಪೂರ್ವ ಬಾಲಕರ ಹಾಗೂ ನಂತರದ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.ರಾಜ್ಯ ಸರಕಾರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಅದರಿಂದ ಲಾಭ ಪಡೆದಕೊಂಡು ತಮ್ಮ ಬದಕನ್ನು ರೂಪಿಸಿಕೊಳ್ಳಬೆಕು ಎಂದು ಕರೆ ನಿಡಿದರು.
ಈಲ್ಲಾ ಕೇಂದ್ರವಾಗಿರುವುದರಿAದ ನಗರ ದಿನ-ದಿನಕ್ಕೆ ವಿಸ್ತಾರವಾಗುತ್ತಿದೆ. ಹೊಸ ಹೊಸ ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದAತೆ ವಸತಿ ನಿಲಯ ಸಹಕಾರಿಯಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ತಾ.ಪಂ. ಸದಸ್ಯ ಪರಶುರಾಮ ಕುರಕುಂದಿ, ಶರಣಗೌಡ ಬಾಡಿಯಾಳ, ಗೋವಿಂದ್, ಬಸವರಾಜಪ್ಪಗೌಡ ಚಿಕ್ಕಬೂದುರ್, ಇಂಜೀನಿಯರ್ ಶ್ರೀನಿವಾಸ, ವಾರ್ಡ ದೇವಿಂದ್ರಪ್ಪ ಸೇರಿದಂತೆ ಇತರರು ಇದ್ದರು.