Saturday, July 2, 2022

Latest Posts

ಯಾದಗಿರಿ| ಶಹಾಪುರ ಪಟ್ಟಣದ ಸಮೀಪ ಗಾಂಜಾ ಸರಬರಾಜು- ಮೂವರ ಬಂಧನ

ಯಾದಗಿರಿ : ಶಹಾಪುರ ಪಟ್ಟಣದ ಸಮೀಪ ಗಾಂಜಾ ಸರಬರಾಜು ಮಾಡುತ್ತಿರುವ ಮೂವರ ಆರೋಪಿಗಳನ್ನು ಪೊಲೀಸರು ಬಂಧಿಸಿ ಅರಲ್ಲಿದ್ದ ಗಾಂಜಾ ಮತ್ತು ನಗದು ಹಣವನ್ನು ವಶÀಕ್ಕೆ ಪಡೆದುಕೊಂಡು ತನಿಖೆ ಮುಂದು ವರಿಸಿದ್ದಾರೆ.
ಅಟೋಗೂಡ್ಸ ೪೦೭ ವಾಹನದಲ್ಲಿ ದೋರನಹಳ್ಳಿ ಗ್ರಾಮದಿಂದ ಶಹಾಪುರಕ್ಕೆ ಕಡೆಗೆ ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇಲೆ ದಾಳಿ ಮಾಡಿ ಗಾಂಜಾ ಮತ್ತು ವಾಹನ ಸಮೇತ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲಾ ಎಸ್ಪಿ, ಋಷಿಕೇಷ ಭಾಗವಾನ್ ಸೊನೆವಾಲೆ ಹಾಗೂ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಸೂಕ್ತ ಮಾರ್ಗದರ್ಶನದಲ್ಲಿ ಶಹಾಪುರ ಪಿ,ಐ ಹನುಮರಡ್ಡಪ್ಪನವರ ಹಾಗೂ ಪಿಎಸ್,ಐ ಚಂದ್ರಕಾoತ ಮೆಕಾಲೆ ಹಾಗೂ ಸಿದ್ದೆಶ್ರ ಗೆರಡೆಯವರ ನೇತೃತ್ವದಲ್ಲಿ ಪೊಲಿಸರ ತಂಡದ ಶಹಾಪುರ ಹೊರಹೊಲಯದ ಶಿರವಾಳ ಕ್ರಾಸ್ ಹತ್ತಿರ ಬರುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ಪರೀಶೀಲನೆ ಕ್ರಮ ಕೈಗೊಂಡಾಗ ವಾಹನದಲ್ಲಿ ೩೦೦೦ ಕೆಜಿ ಪಪ್ಪಾಯಿ ಹಣ್ಣು ಅಂದಾಜು ೧೮೦೦೦ ಸಾವಿರ ರೂ ಮೌಲ್ಯದದ್ದಾಗಿದ್ದು ಅದರಲ್ಲಿ ೫ ಕೆಜಿ, ೩೦೦ ಗ್ರಾಂ, ಗಾಂಜಾ ಅಂದಾಜು ೫೫೦೦೦ ಸಾವಿರ ರೂ ಮೌಲ್ಯದ ಗಾಂಜಾ ಪತ್ತೇಯಾಗಿದೆ.
ಆರೋಪಿತರಾದ ನಿಂಗಪ್ಪ ತಂದೆ ಮಲ್ಲಪ್ಪ ಬೇವಿನಕಟ್ಟಿ, ಸಾ,ಬಾಣತಿಹಾಳ, ಹಾಗೂ ಜುಬೇರ ತಂದೆ ಅದಮ್ಮ ಕಮ್ಮಂಜಿ ತಾ,ಪುತ್ತೂರ ದಕ್ಷಿಣ ಕನ್ನಡ ಜಿಲ್ಲೆ ಮಹಮ್ಮದ ಸೊಪಿಯಾನ ತಂದೆ ಅಬ್ದುಲ್ ಹಕ್ಕಿಂ ಸಾ, ಉಳಿಮಾವು ಬನ್ನೆರಘಟ್ಟ ಬೆಂಗಳೂರು ಇವರುಗಳನ್ನು ೨೦ ಸಾವಿರ ನಗದು ಹಣದ ಸಮೇತ ದಸ್ತಗಿರಿ ಮಾಡಿಕೊಂಡು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss