ಯಾದಗಿರಿ: ಪಶು ಸಂಗೋಪನೆ, ಹಜ್, ವಕ್ಫ್ ಮತ್ತು ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರಿಗೆ ಕೊರೊನಾ ಪಾಜಿಟಿವ್ ಬಂದಿದೆ. ಮೊನ್ನೆಯಷ್ಟೆ ಅವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಪಾಜಿಟಿವ್ ಬಂದ ಕಾರಣ ಸಚಿವರು ಕ್ವಾರಂಟೈನ್ ಗೆ ಒಳಗಾಗಿದ್ದರು.
ನಿನ್ನೆ ಸಚಿವರು ಸ್ವತಃ ವೈದ್ಯರನ್ನು ಕರೆಯಿಸಿ ಪರೀಕ್ಷಿಸಿಕೊಂಡಾಗ ಸೋಂಕು ಧೃಢಪಟ್ಟಿದ್ದು, ಅವರೊಂದಿಗೆ ಅವರ ಅಣ್ಣನ ಮಗ ದಿಲೀಪ್ ಚವ್ಹಾಣ ಅವರಿಗೂ ಸೋಂಕು ಧೃಢಪಟ್ಟಿದೆ. ಇತ್ತೀಚೆಗೆ ಸಚಿವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕೆಂದು ಸಚಿವರು ಕೋರಿದ್ದಾರೆ.