ಯಾದಗಿರಿ: ಕೆಂಭಾವಿ ಪಟ್ಟಣ ಸಮೀಪದ ಎಮ್.ಬೊಮ್ಮನಹಳ್ಳಿ ಗ್ರಾಮದ ರೈತನೊಬ್ಬ ಸಾಲಭಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಡೆದಿದೆ.
ಗುತ್ತಪ್ಪಗೌಡ ತಂದೆ ಸೋಮನಗೌಡ ಬಿರಾದಾರ ಆತ್ಮಹತ್ಯೆ ಮಾಡಿಕೊಂಡ ರೈತ. ಗುತ್ತಪ್ಪಗೌಡನಿಗೆ ೮ ಎಕರೆ ೨೩ ಗುಂಟೆ ಜಮೀನಿದ್ದು, ಬೊಮ್ಮನಹಳ್ಳಿ ಗ್ರಾಮದ ವಿಎಸ್ಎಸ್ಎನ್ ಬ್ಯಾಂಕಿನಲ್ಲಿ ೪೦ ಸಾವಿರ, ಕೆಂಭಾವಿ ಎಸ್ಬಿಐ ಬ್ಯಾಂಕಿನಲ್ಲಿ ೧ ಲಕ್ಷ ೫೦ ಸಾವಿರ ಸಾಲ ಮಾಡಿದ್ದ. ಅಲ್ಲದೆ ಹೊರಗಡೆ ೪ ಲಕ್ಷದವರೆಗೂ ಕೈ ಸಾಲ ಸಹ ಮಾಡಿದ್ದ ಎಂದು ತಿಳಿದುಬಂದಿದೆ.
ಕೃಷಿ ಚಟುವಟಿಕೆಗಳಿಗಾಗಿ ಮಾಡಿದ ಸಾಲ ತೀರಿಸುವುದು ಹೇಗೆಂಬ ಚಿಂತೆಯಿoದ ಮಾನಸಿಕವಾಗಿ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಘಟನೆಗೆ ಸಂಬoಧಿಸಿದoತೆ ಮೃತರ ಪತ್ನಿ ಮಲ್ಲಮ್ಮ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.