ಯಾದಗಿರಿ ಸುರಪುರ: ನಗರದ ಪಾಲಿಟೆಕ್ನಿಕ್ ಕಾಲೇಜು ಮತ್ತು ಅಲ್ಪ ಸಂಖ್ಯಾತರ ವಸತಿ ನಿಲುದ ಕ್ವಾರಂಟೈನ್ ಕೇಂದ್ರದಲ್ಲಿ ವಾಸವಿದ್ದ 177 ಜನ ವಲಸೆ ಕಾರ್ಮಿಕರ ಕೊರೋನಾ ವರದಿ ನೆಗಟಿವ್ ಬಂದಿವೆ. ಕಾರಣ ಗುರುವಾರ ಸಂಜೆ ನೆಗಟಿವ್ ವರದಿ ಬಂದಿರುವ ಕಾರ್ಮಿಕರನ್ನು ಗುರುತಿಸಿ ತಾಲೂಕು ಆಡಳಿತವು ಅವರನ್ನು ಆಯಾ ಗ್ರಾಮಗಳಿಗೆ ಬಸ್ಗಳ ಮೂಲಕ ಕಳಿಸಿಕೊಡಲಾಯಿತು.
ಮಹಾರಾಷ್ಟç ಸೆರಿದಂತೆ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ್ದ ವಲಸೆ ಕಾರ್ಮಿಕರನ್ನು ನಗರದ ಕ್ವಾರಂಟೈನ್ ಕೇಂದ್ರಗಳಲ್ಲಿ ಅವಲೋಕನೆಗೆ ಇರಿಸಲಾಗಿತ್ತು. ಎಲ್ಲಾ ಕಾರ್ಮಿಕರ ಗಂಟಲು ದ್ರವ ಮತ್ತು ರಕ್ತ ತಪಾಸಣೆ ಕಳಿಸಲಾಗಿತ್ತು. ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕ್ವಾರಂಟೈನ್ ಕೇಂದ್ರದ 136 ಮತ್ತು ಅಲ್ಪ ಸಂಖ್ಯಾತರ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದ 41 ಸೇರಿ ಒಟ್ಟು 177 ಜನರ ಮಾದರಿ ವರದಿಗಳು ನೆಗಟಿವ್ ಬಂದಿವೆ ಇವರೆಲ್ಲರೂ 14 ದಿನಗಳ ಪೂರ್ಣಗೊಂಡ ಹಿನ್ನಲೆಯಲ್ಲಿ ಕಾರ್ಮಿಕರನ್ನು ಸ್ವಂತ ಗ್ರಾಮಗಳಿಗೆ ಕಳಿಸಿಕೊಡಲಾಗಿದೆ.
ಕಾರ್ಮಿಕರು ಗ್ರಾಮಕ್ಕೆ ಹೋದ ಮೇಲೆ ಹೊರಗಡೆ ತಿರುಗಾಡದಂತೆ, ಸಭೆ ಸಮಾರಂಭಗಳಲ್ಲ ಭಾಗವಹಿಸದಂತೆ, ಯಾರೊಂದಿಗೂ ಬೆರೆಯದೆ 14 ದಿನ ಮನೆಯಲ್ಲಿಯೇ ಇರಲು ಹೋಂ ಕ್ವಾರಂಟೈನ್ ಅನುಸರಿಸುವಂತೆ ಸೂಚಿಸಲಾಗಿದೆ. ಇವರಿಂದ ಸಾಮಾಜಿಕ ಅಂತರ ಕಾಯ್ದಕೊಳ್ಳಲು ಅವರ ಕುಟುಂಬದವರಿಗೂ ತಿಳಿಸಲಾಗಿದೆ ಎರಡು ಕೇಂದ್ರಗಳಲ್ಲಿ ಇನ್ನೂ ಕೆಲವರ ವರದಿ ಬರಬೇಕಿದೆ. ವರದಿ ಬಂದನAತರ ಅವರನ್ನು ಕಳಿಸಿಕೊಡಲಾಗುವುದು ಎಂದು ತಹಸೀಲ್ದಾರ ನಿಂಗಣ್ಣ ಬಿರಾದಾರ ತಿಳಿಸಿದರು.
ಶಿಸು ಅಭಿವೃದ್ದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕ ಪ್ರಭಾಕರ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ, ಸಿಡಿಪಿಒ ಲಾಲಸಾಬ ಪೀರಾಪುರ ಇದ್ದರು