ಯಾದಗಿರಿ: ನೆರೆಯ ರಾಜ್ಯಗಳಾದ ಮಾಹರಾಷ್ಟ್ರದಿಂದ ಬರುವ ಕಾರ್ಮಿಕರಿಗೆ ಅವರ ಸ್ವಗ್ರಾಮಗಳಿಗೆ ಹೋಗಲು ಉಚಿತವಾಗಿ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ಶಾಸಕ ರಾಜುಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಇದರಿಂದ ಗುರುವಾರದಂದು ಬರಬೇಕಾದ ೩೦ ಬಸ್ಗಳಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಕಾರ್ಮಿಕರು ಬೆಳಗಾವಿಯ ಕಾಗವಾಡ ಚೆಕ್ ಪೋಸ್ಟ್ನವರಿಗೂ ಬಂದು ಸೇರಿದ್ದರು. ಆದರೆ ಬೆಳಗಾವಿ ಸಾರಿಗೆ ಸಂಸ್ಥೆಯಿಂದಾಗಲಿ, ಯಾದಗಿರಿ ಜಿಲೆಯಿಂದಾಗಲಿ ಬಸ್ಸಿನ ಸೌಕರ್ಯ ಇಲ್ಲದೆ ಪರದಾಡಿದ ಘಟನೆ ಜರಗಿದೆ.
ಇನ್ನೂ ಎರಡು ದಿನಗಳ ಹಿಂದೆಯೆ ಬರುವಂತಹ ಕಾರ್ಮಿಕರಿಗೆ ಗಡಿಭಾಗದ ಚೆಕಪೋಷ್ಟನಿಂದ ಅವರವರ ಊರುಗಳಿಗೆ ಸರ್ಕಾರಿ ಬಸ್ಗಳ ಮೂಲಕ ಉಚಿತವಾಗಿ ಕರೆದುಕೊಂಡು ಬರುತ್ತೇವೆ ಎಂದು ತಿಳಿಸಿದ್ದರು. ಆ ಹಿನ್ನಲೆಯಲ್ಲಿ ಸಾವಿರಾರು ಕಾರ್ಮಿಕರು ಚೆಕ್ ಪೋಸ್ಟನತ್ತ ಬಂದಿದ್ದರು. ಆದ್ರೆ ಯಾದಗಿರಿ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಬಸಗಳನ್ನು ಬಿಡುವಂತೆ ಆದೇಶಿಸಿದ್ದರು ಬೆಳಗಾವಿಯ ಅಧಿಕಾರಿಗಳಿಂದ ಉತ್ತಮ ಸ್ಪಂದನೆ ಸಿಗಲಿಲ್ಲ. ಅಲ್ಲದೆ ಹಣ ಪಾವತಿಸಿದರೆ ಮಾತ್ರ ಬಸ್ಗಳನ್ನು ಬಿಡಲಾಗುವುದು ಎಂದು ತಿಳಿಸಿ ತಮ್ಮ ಕರ್ತವ್ಯದಿಂದ ನುಣಚಿಕೊಂಡಿದ್ದಾರೆ.
ಸ್ವಂತ ದುಡ್ಡು ಕಟ್ಟಿ ಕಾರ್ಮಿಕರಿಗೆ ಸಹಾಯ : ಗಡಿಭಾಗದಲ್ಲಿ ಬಸ್ಸಿಗೆ ಹಣವಿಲ್ಲದೆ ಕಾರ್ಮಿಕರು ಪರದಾಟದಲ್ಲಿದ್ದ ಸುದ್ದಿತಿಳಿದ ತಕ್ಷಣ ಸುರುಪುರ ಶಾಸಕ ರಾಜುಗೌಡ ಅವರ ನೆರವಿಗೆ ದಾವಿಸಿದರು. ಬಸ್ಸಿನ ದರ ಒಂದು ಟಿಕೇಟ್ ೩೦೦ ರೂ ಇದ್ದರೂ ಪ್ರತಿ ಟಿಕಿಟಿಗೆ ೧೧೦೦ ರೂಪಾಯಿ ಕೊಟ್ಟು ಕಾರ್ಮಿಕರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಶಾಸಕರ ಅಸಮದಾನ : ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದರೂ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡದೆ ರಿರುವುದು ತೀವ್ರ ಬೇಸರ ತಂದಿದೆ. ವಿಜಯಪೂರದ ಕಾರ್ಮಿಕರಿಗೆ ಉಚಿತವಾಗಿ ಕಳುಹಿಸಿಕೊಟ್ಟು ನಮ್ಮ ಜಿಲ್ಲೆಯ ಕಾರ್ಮಿಕರಿಗೆ ಹಣಕೇಳಿದ್ದು ಸರಿಯಲ್ಲ. ಎಲ್ಲರಿಗೂ ಅಧಿಕಾರಿಗಳಿಂದ ಎರಡು ಜಿಲ್ಲೆಗೂ ಒಂದೇ ನ್ಯಾಯ ಒದಗಿಸಬೇಕಿತ್ತು. ಆದ್ರೆ ಧ್ವಂದ ನೀತಿ ಅನುಸರಿದ್ದು ಅಧಿಕಾರಗಳ ಬೇಜವ್ಬಾ÷್ದರಿ ತೋರಿಸುತ್ತದೆ ಎಂದು ಶಾಸಕ ರಜುಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.