Wednesday, August 17, 2022

Latest Posts

ಯಾದಗಿರಿ| ಹತ್ತಿ ಮಾರಾಟಕ್ಕೆ ಜಿಲ್ಲೆಯ ರೈತರ ಪರದಾಟ: ರಸ್ತೆಯುದ್ದಕ್ಕೂ ಟ್ರಾಕ್ಟರ್ ಗಳ ನಿಲುಗಡೆ: ಟ್ರಾಪೀಕ್ ಜಾಮ್ ಪ್ರಯಾಣಿಕರು ಹೈರಾಣು..

ಯಾದಗಿರಿ : ಜಿಲ್ಲೆಯ ಜನರು ತಾವು ಬೆಳೆದ ಹತ್ತಿಯನ್ನು ಬೆಂಬಲ ಬೆಲೆಗೆ ಮಾರಟ ಮಾಡಲು ಪ್ರತಿನಿತ್ಯ ಹರಸಾಹಸ ಮಾಡುವಂತಾಗಿದೆ.
ಜಿಲ್ಲೆಯ ಶಹಾಪೂರ ತಾಲೂಕಿನಲ್ಲಿ ಮಾತ್ರ ಎರಡು ಹತ್ತಿ ಮಿಲ್‌ಗಳಲ್ಲಿ ಭಾರತ ಹತ್ತಿ ನಿಗಮವು ಕೇಂದ್ರ ಸರಕಾರದ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತಿದೆ.

ಕೊರೋನಾ ಇಫೆಕ್ಟದಿಂದ ಮಾರುಕಟ್ಟೆಯಲ್ಲಿ ಹತ್ತಿಯ ಬೆಲೆ ಸಂಪೂರ್ಣ ನೆಲಕಚ್ಚಿದೆ. ಇದರಿಂದಾಗಿ ಜಿಲ್ಲೆಯ ತಾಲೂಕಿನ ಹತ್ತಿ ಬೆಳೆಗಾರರು ಸೂಕ್ತ ಬೆಂಬಲ ಬೆಲೆಗೆ ಮಾರಾಟ ಮಾಡಲು ಇವೆರಡು ಮಿಲ್ಲುಗಳ ಮೇಲೆ ಅವಲಂಭಿತರಾಗಿದ್ದಾರೆ.

ಹತ್ತಿ ಖರೀದಿಸಲು ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಅಲ್ಲದೆ ದಿನಕ್ಕೆ 15 ರಿಂದ 20 ರೈತರಲ್ಲಿ ಮಾತ್ರ ಹತ್ತಿಯನ್ನು ಖರೀದಿಸಲಾಗುತ್ತಿದೆ. ಇದನ್ನೇ ಕೆಲ ದಲ್ಲಾಲಿಗಳು ದುರಪುಯೋಗ ಪಡಿಸಿಕೊಂಡು ದುಡ್ಡು ಕೊಟ್ಟ ರೈತರಿಗೆ ಮಾತ್ರ ಖರೀದಿಗೆ ಅವಕಾಶ ಒದಗಿಸಲಾಗುತ್ತಿದೆ. ಹೀಗಾಗಿ ನೂರಾರು ರೈತರ ಟ್ರಾಕ್ಟರ್ ಗಳು ಹತ್ತಿ ಮಿಲ್ಲಗಳ ಮುಂದಿನ ಶಹಾಪುರ -ಸಿಂದಗಿ ರಾಜ್ಯ ಹೆದ್ದಾರಿಯ ಮೇಲೆ ಸಾಲು ಗಟ್ಟಲೆ ನಿಂತಿರುವುದರಿAದ ಇತರ ವಾಹನ ಸವಾರರು ಹೈರಾಣು ಪಡುವಂತಾಗಿದೆ.

ಈಗಾಗಲೇ ರೈತರು ಜಿಲ್ಲೆಯ ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನಲ್ಲಿ ಹತ್ತಿ ಕೇಂದ್ರ ಸ್ಥಾಪನೆಗೆ ಒತ್ತಾಯ ಮಾಡಿದರೂ ಕೊರೋನಾ ಬ್ಯುಸಿಯಲ್ಲಿ ಮುಳಗಿದ ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ಉಸ್ತುವಾರಿ ಸಚಿವರಾಗಲಿ ಮತ್ತು ಜನಪ್ರತಿನಿಧಿಗಳಾಗಲಿ ರೈತರ ಹಿತ ಕಾಪಾಡುವಲ್ಲಿ ವಿಫಲಾರಾಗಿದ್ದಾರೆ. ಇನ್ನೂ ಜಿಲ್ಲಾ ಪಂಚಾಯತ್ ಜನಪ್ರತನಿಧಿಗಳಂತೂ ಕಣ್ಣು ಇದ್ದು ಕುರಡರಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ನೋವು ಯಾರ ಮುಂದೆ ಹಂಚಿಕೊಳ್ಳಬೆಕು ಎಂಬುದು ರೈತರ ಅಳಲಾಗಿದೆ.

ದಲ್ಲಾಳಿಗಳದ್ದೆ ಕಾರುಬಾರು : ಸರಕಾರ ರೈತರು ತಾವು ಮಾಡಿದ ಹಣ ಬೇರೆಯವರ ಪಾಲಾಗಬಾರದು ಎಂದು ನೇರವಾಗಿ ಅವರ ಹೆಸರಿನಲ್ಲಿ ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲ ದಲ್ಲಾಳಿಗಳು ಮಾರಾಟದ ಸಮಸ್ಯೆಯನ್ನು ಸೃಷ್ಟಿಸಿ ರೈತರಲ್ಲಿ ಹನ ವಸೂಲಾತಿಗೆ ನಿಂತಿದ್ದಾರೆ. ಇದು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಇದ್ದರೂ ಯಾವುದೆ ಕ್ರಮ ಜರಗಿಸದೆ ಅವರಿಗೆ ಕುಮ್ಮಕ್ಕೂ ಕೊಟ್ಟಂತಾಗಿದೆ ರೈತ ಮುಖಂಡರ ಆರೋಪವಾಗಿದೆ. ಮಾರಾಟ ಮಾಡಲು ಎರಡು ಮೂರು ದಿನ ಕಾಯಬೆಕಾಗುತ್ತದೆ. ಅದಕ್ಕಾಗಿ ಕೆಲವು ರೈತರು ದಲ್ಲಾಳಿಗಳಿಗೆ ಹಣ ನೀಡಿ ಮಾರಾಟ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಬಡ ರೈತರು ಪರದಾಡುವಂತಾಗಿದೆ. ಒಟ್ಟಾರೆ ರೈತರ ಲಾಭ ದಲ್ಲಾಳಿಗಳ ಜೇಬಿಗೆ ಸೇರುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಟ್ರಾಫಿಕ ನಿಯಂತ್ರಿಸುವಲ್ಲಿ ನಿರ್ಲಕ್ಷ: ಮಿಲ್ ಆಡಳಿತ ಮಂಡಳಿಯಾಗಲಿ, ಪೊಲೀಸ್ ಇಲಾಖೆಯಾಗಲಿ ಟ್ತಾಫಿಕ ನಿಯಂತ್ರಿಸುವ ಗೋಜಿಗೆ ಹೋಗಿಲ್ಲ. ಇವರ ನಿರ್ಲಕ್ಷÀದಿಂದ ಸಾಮಾನ್ಯ ಜನರು ಸಂಚಾರಕ್ಕಾಗಿ ಪರದಾಡುವಂತಾಗಿದೆ ಎಂದು ಮಾತಾಡಿಕೊಳ್ಳುತ್ತಿದ್ದರೆ. ಸಂಬAಧಿತರು ಇತ್ತ ಗಮನ ಹರಿಸಿ ಸುಗುಮ ಸಂಚಾರಕ್ಕೆ ಅನಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!