ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಬುಧವಾರ ಸಂಜೆ ಸುರಿದ ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹುಣಸಗಿ ತಾಲೂಕಿನ ಕಕ್ಕೇರಾ ವಲಯದಲ್ಲಿ ಸೂಮಾರು 98.4 ಮಿಲಿ ಮೀಟರ್ ಮಳೆ ಸುರಿದಿದ್ದು ಜನರು ತೀವ್ರ ತೊಂದರೆ ಪಡುವಂತಾಗಿದೆ.ತಾಲೂಕಿನ ಕಲ್ಲದೇವನಹಳ್ಳಿಯಲ್ಲಿ ಮಳೆ ನೀರು ನುಗ್ಗಿ ಜಲಾವೃತ್ತಗೊಂಡು ಅನೇಕ ಕುಟುಂಬಗಳು ಊಟ ನೀರಿಲ್ಲದೆ ಪರದಾಡು ಸ್ಥಿತಿ ಉಂಟಾಗಿದೆ.
ಗ್ರಾಮದ ಸಾಬಮ್ಮ ಹಣಮಂತ ಕಲಾಲ ಎಂಬ ವಯೋವೃದ್ಧೆಯ ಮನೆಯೊಳಗೆ ನೀರು ಹೊಕ್ಕು ಇಡೀ ಮನೆ ಜಲಾವೃತಗೊಂಡು ಮನೆಯಲ್ಲಿನ ಎಲ್ಲಾ ವಸ್ತುಗಳು ಹಾಳಾಗಿವೆ. ಕಳೆದ ಮೂರು ದಿನಗಳಿಂದ ಮನೆಯಲ್ಲಿ ನೀರು ತುಂಬಿದ್ದರಿಂದ ಯಾವುದೇ ಅಧಿಕಾರಿ ಬಂದು ವಿಚಾರಿಸದೆ ಇರುವುದರಿಂದ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾಳೆ. ಮೂರು ದಿನಗಳಿಂದಲೂ ವೃದ್ಧ ಮಹಿಳೆ ಸಂಕಷ್ಟದಲ್ಲಿದ್ದರು ಇದುವರೆಗೆ ಯಾವೊಬ್ಬ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಭೇಟಿ ನೀಡದಿರುವುದು ನೋವಿನ ಸಂಗತಿಯಾಗಿದೆ.
ಸತತ ಮಳೆಯಿಂದ ಅನೇಕ ರಸ್ತೆಗಳು ಸಹ ಕೊಚ್ಚಿಹೋಗಿವೆ. ಇನ್ನು ಕೆಲ ಸೇತುವೆಗಳು ಜಲಾವೃತ್ತಗೊಂಡು ಸಂಚಾರಕ್ಕು ಪರದಾಡುವಂತಾಗಿದೆ. ಈಗಲಾದರೂ ಜಿಲ್ಲಾಡಳಿತ ಮಳೆಯಿಂದ ತೊಂದರೆಗೀಡಾದ ಜನತೆಗೆ ಸಹಾಯ ಹಸ್ತ ನೀಡಲು ಮುಂದಾಗಬೇಕು ಎಂಬುದು ಜನರ ಆಗ್ರಹವಾಗಿದೆ.