Friday, July 1, 2022

Latest Posts

ಯಾದಗಿರಿ| ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘದಿಂದ ಪ್ರತಿಭಟನೆ

ಯಾದಗಿರಿ: ಎಲ್ಲಾ ಹೊರಗುತ್ತಿಗೆ (ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ/ ವಸತಿಶಾಲೆ/ಆಶ್ರಮ ಶಾಲೆಗಳ ಕಾರ್ಮಿಕರನ್ನು ಸೇರಿದಂತೆ) ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ಸಂಪೂರ್ಣ ವೇತನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ(ರಿ) (ಎಐಯುಟಿಯುಸಿಗೆ ಸಂಯೋಜಿತ) ಯಾದಗಿರಿ ಜಿಲ್ಲಾ ಸಮತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಹಾಗು ವಸತಿ ಶಿಕ್ಷಣ ಇಲಾಖೆಯ ಸಚಿವರು ಮತ್ತು ಮುಖ್ಯಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷೆ ಡಿ ಉಮಾದೇವಿ ಮಾತನಾಡಿ, ಸರ್ಕಾರವು ಯಾವ ಸಂಧರ್ಭದಲ್ಲಾದರೂ ಶೈಕ್ಷಣಿಕೆ ವರ್ಷ ಪ್ರಾರಂಭಿಸುವ ಸಾಧ್ಯತೆ ಇರುವುದರಿಂದ ಜೂನ್ ತಿಂಗಳಿನಿAದ ಹಾಸ್ಟೆಲ್, ವಸತಿಶಾಲೆ ಮತ್ತು ಆಶ್ರಮಶಾಲೆಗಳ ಸ್ಯಾನಿಟೈಜೇಷನ್ ಕೆಲಸ, ನಿರ್ವಹಣೆ ಮತ್ತು ಪೂರ್ವ ಸಿದ್ಧತಾ ಕೆಲಸಗಳನ್ನು ಪ್ರಾರಂಭಿಸಿ ಎಂದಿನAತೆ ವೇತನ ಜಾರಿಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಗುತ್ತಿಗೆಕಾರ್ಮಿಕರಿಗೂ ವೇತನ ನೀಡಬೇಕೆಂದು ಸುತ್ತೋಲೆ ಹೊರಡಿಸಿದೆ. ಆದರೆ ಕೆಲವು ಅಧಿಕಾರಿಗಳು ವೇತನ ನೀಡಿದರೆ ಇನ್ನೂ ಕೆಲವು ಅಧಿಕಾರಿಗಳು ಲಾಕ್‌ಡೌನ್ ಅವಧಿಯ ವೇತನ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಕೆಲವು ಕಡೆ ಮೆಟ್ರಿಕ್ ನಂತರದ ಹಾಸ್ಟೆಲ್‌ಕಾರ್ಮಿಕರಿಗೆ ಮಾತ್ರ ವೇತನ ನೀಡುತ್ತಿದ್ದು, ಮೆಟ್ರಿಕ್ ಪೂರ್ವ, ವಸತಿ ಶಾಲೆ ಮತ್ತು ಆಶ್ರಮ ಶಾಲೆಗಳ ಕಾರ್ಮಿಕರಿಗೆ ವೇತನ ನೀಡಲು ನಿರಾಕರಿಸಲಾಗುತ್ತಿದೆ. ಸಾಮಾನ್ಯವಾಗಿ ಈ ಕಾರ್ಮಿಕರು ರಜಾ ಸಂಧರ್ಭದಲ್ಲಿ ಬೇರೆಕಡೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್& ಮೇ ತಿಂಗಳಲ್ಲಿ ಲಾಕ್‌ಡೌನ್ ನಿಂದಾಗಿ ಬೇರೆ ಕೆಲಸಗಳಿಗೆ ಹೋಗಲು ಸಾಧ್ಯವಾಗಿಲ್ಲ. ಇಂತಹ ಸಂಧರ್ಭದಲ್ಲಿ ಸರ್ಕಾರದ ಆದೇಶಕ್ಕನುಗುಣವಾಗಿ ಈ ಕಾರ್ಮಿಕರಿಗೆ ವೇತನ ನೀಡಲು ಇಲಾಖೆಗಳು ತುರ್ತುಕ್ರಮವಹಿಸಬೇಕು. ಇಲ್ಲವಾದರೆ ಮುಂದಿನದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತz ಎಂದು ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವಿಕರಿಸಿದ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ ಅವರು, ಈ ಕುರಿತು ಇಲಾಖೆಗಳ ಎಲ್ಲಾ ಉಪನಿರ್ದೇಶಕರ ಸಭೆ ಕರೆದು, ಒಂದು ವಾರದೊಳಗೆ ಬಾಕಿ ವೇತನ ಬಿಡುಗಡೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಲಿಂಗಪ್ಪ ಬಿ.ಎನ್, ಶರಣಪ್ಪ ಯಡ್ಡಳ್ಳಿ, ಸಿದ್ದಪ್ಪ, ಗಜಾನನ, ಭೀಮಶಂಕರ, ಶ್ರೀಕಾಂತ, ಭಾಗಪ್ಪ, ಹಣಮಂತ, ಮರಳಮ್ಮ, ಶ್ರೀದೇವಿ, ಲಕ್ಷಿö್ಮÃ, ಪದ್ಮಾ, ನಾಗಮ್ಮ, ಅಂಬಮ್ಮ, ಮಾಳಮ್ಮ, ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss