Monday, August 15, 2022

Latest Posts

ಯಾದಗಿರಿ| ಹೊರಗುತ್ತಿಗೆ ನೌಕರರ ಸಮಸ್ಯೆಗಳ ಶೀಘ್ರ ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ

ಯಾದಗಿರಿ: ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್, ವಸತಿ ಶಾಲೆ ಮತ್ತು ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (ರಿ) (ಎಐಯುಟಿಯುಸಿ ಗೆ ಸಂಯೋಜಿತ)ದ ನೇತೃತ್ವದಲ್ಲಿ ಶುಕ್ರವಾರ  ಜಿಲ್ಲಾ ಪಂಚಾಯತ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು.
ಸಂಬoಧಿತ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮುಖಂಡರು, ಹೊರಗುತ್ತಿಗೆ ಕಾರ್ಮಿಕರು ಹಲವಾರು ವರ್ಷಗಳಿಂದ ಅತಿ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಮಾಜ ಕಲ್ಯಾಣ ವ್ಯಾಪ್ತಿಯ ಕಾರ್ಮಿಕರಿಗೆ ಇನ್ನೂ 5-6 ತಿಂಗಳ ವೇತನ ಬಾಕಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಗುತ್ತಿಗೆ ಕಾರ್ಮಿಕರಿಗೂ ವೇತನ ನೀಡಬೇಕೆಂದು ಸುತ್ತೋಲೆ ಹೊರಡಿಸಿವೆ. ಆದರೆ ಕೆಲವು ಅಧಿಕಾರಿಗಳು ಲಾಕ್‌ಡೌನ್ ಅವಧಿಯ ವೇತನ ನೀಡುತ್ತಿಲ್ಲ. ಕಾರಣ ಕೇಳಿದರೆ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಮಾಡಿದರೆ ಮಾತ್ರ ನೀಡುವುದಾಗಿ ತಿಳಿಸುತ್ತಿದ್ದಾರೆ ಮತ್ತು ಕೆಲವು ಕಡೆ ಪ್ರಿಮೆಟ್ರಿಕ್ ಹೊರತುಪಡಿಸಿ ಇತರರಿಗೆ ನೀಡಿದ್ದಾರೆ ಎಂದು ಸೂರಿಸಿದರು.
ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಪ್ರಿ ಮೆಟ್ರಿಕ್ / ವಸತಿಶಾಲೆಗಳು / ಆಶ್ರಮ ಶಾಲೆ ರಜೆ ಇರುವುದರಿಂದ ವೇತನ ಬರುವುದಿಲ್ಲವೆಂದು ತಿಳಿಸುತ್ತಿದ್ದಾರೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಬೇರೆ ಕೆಲಸಗಳನ್ನು ನಿರ್ವಹಿಸುವುದು ಸಾಧ್ಯವಿಲ್ಲ. ಹಾಗಾಗಿ ಇಲಾಖೆಗೆ ಕನಿಷ್ಟ ಕೂಲಿಗೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಕಾರ್ಮಿಕರಿಗೆ ಇಂತ ವಿಶೇಷ ಸಂಧರ್ಭದಲ್ಲಿ ಸರ್ಕಾರವು ವೇತನ ನೀಡಿ ಒಬ್ಬ ಮಾದರಿ ಉದ್ಯೋಗದಾತನಾಗಬೇಕು. ಹಾಸ್ಟೆಲ್‌ಗಳಲ್ಲಿನ ಆಹಾರ ಸಾಮಾಗ್ರಿಗಳು ಹಾಳಾಗುವ ಮುನ್ನ, ತಕ್ಷಣಕ್ಕೆ ಈ ಸಾಮಾಗ್ರಿಗಳನ್ನು ಇಲಾಖೆಯ ಗುತ್ತಿಗೆ ಕಾರ್ಮಿಕರಿಗೆ ವಿತರಿಸುವ ಕ್ರಮ ವಹಿಸಬೇಕು. ಕೊವಿಡ್-19 ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಸೊಂಕು ತಗುಲಿದರೆ, ಆಸ್ಪತ್ರೆಯ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಬೇಕುಎಂದು ಒತ್ತಾಯಿಸಿದರು.
ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರಿಗರ ನೀಡಿದಂತೆ 50 ಲಕ್ಷ ವಿಮೆ ಸೌಲಭ್ಯವನ್ನು ಇವರಿಗೂ ಕಲ್ಪಿಸಬೇಕು. ಕಾನೂನಿನನ್ವಯ ಗುತ್ತಿಗೆದಾರನು ಕಾರ್ಮಿಕರಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿರುವ ಕುರಿತು ಪ್ರತಿ ತಿಂಗಳು ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳುವಂತೆ ವಿಶೇಷ ಸೂಚನೆಯನ್ನು ನೀಡಬೇಕೆಂದು ಎಂದು ಮಾನ್ಯ ಸಮಾಜ ಕಲ್ಯಾಣ, ಬಿಸಿಎಂ ಹಾಗು ಅಲ್ಪಸಂಖ್ಯಾತರ ಇಲಾಖೆಯ ಸಚಿವರುಗಳಿಗೆ ಆಯಾ ಇಲಾಖೆಯ ಉಪನಿರ್ದೇಶಕರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಮುಖಂಡರಾದ ರಾಮಲಿಂಗಪ್ಪ ಬಿ.ಎನ್, ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ಧೀನ್, ಹಾಸ್ಡೇಲ್ ಕಾರ್ಮಿಕರಾದ ಭೀಮಶಂಕರ, ಜೈಭೀಮ, ಶ್ರೀಕಾಂತ, ಭಾಗಪ್ಪ, ನಾಗಮ್ಮ, ಪದ್ಮಾ, ಜಗದೇವಿ, ಲಕ್ಷ್ಮೀ , ಸುಮಂಗಲಾ, ಶ್ರೀದೇವಿ, ಅನುಸುಯಾ, ಬನ್ನಮ್ಮ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss