ಯಾದಗಿರಿ: ಹೆರಿಗೆಗಾಗಿ 108 ಆಂಬುಲೆನ್ಸ್ ನಲ್ಲಿ ತುಂಬು ಗರ್ಭಿಣಿಯನ್ನು ಬುಧವಾರದಂದು ಆಸ್ಪತ್ರೆಗೆ ಕರೆತರುವಾಗ ಆಂಬುಲೆನ್ಸ್ ನಲ್ಲಿಯೇ ನೋವು ಕಾಣಸಿಕೊಂಡಿದ್ದರಿoದ ಹೆರಿಗೆ ಮಾಡಿಸಿದ ಘಟನೆ ಶಹಾಪೂರ ತಾಲೂಕಿನ ರಸ್ತಾಪೂರ ಮಾರ್ಗ ಮಧ್ಯೆ ಜರಗಿದೆ.
ತಾಲುಕಿನ ಮಂಡಗಳ್ಳಿ ಗ್ರಾಮದ ಗರ್ಭಣಿ ತಾಯಿಯನ್ನು, ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆ ತರವಾಗ ಈ ಪ್ರಸಂಗ ನೆಡೆದಿದೆ. 108 ನಲ್ಲಿ ಇದ್ದ ಚಾಲಕ ಮಾಹಾದೇವ ಸ್ಟಾಪ್ ನಸ್೯ ಭೀಮರಾಯರವರು ತೀವ್ರ ನೋವಿನಿಂದ ನರಳುತ್ತಿದ್ದ ಈ ಗರ್ಭಣಿ ತಾಯಿಗೆ ಸಹಕರಿಸಿ ಹೆರಿಗೆ ಮಾಡಿಸಿದರು.
ರಸ್ತೆಯಲ್ಲಿಯೇ ನಿಂತು ಹೆರಿಗೆ ಮಾಡಿದ 108 ಸಿಬ್ಬಂದಿಯವರ ಮಾನವೀತೆಗೆ ಜನತೆ ಮೆಚ್ಚುಗೆ ತೋರಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ ಈ ತಾಯಿ ಆರೋಗ್ಯದಿಂದ ಸುರಕ್ಷಿವಾಗಿದ್ದಾಳೆ. ಅಲ್ಲದೆ ಮಗು ಸಹ ಆರೋಗ್ಯದಿಂದ ಸದೃಡವಾಗಿದೆ ಎಂದು ಆಸ್ಪತ್ರೆಯ ವೈಧ್ಯರು ತಿಳಿಸಿದ್ದಾರೆ.